ಪಟನಾ:ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಚುನಾವಣೆ ಶುರುವಾಗಿದ್ದು, 17 ಜಿಲ್ಲೆಗಳ 94 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯೇ ಮತದಾನ ಆರಂಭವಾಗಿದೆ. ಆರ್​ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹಾಗೂ ಅವರ ಸಹೋದರ ತೇಜ್ ಪ್ರತಾಪ್ ಅವರ ರಾಜಕೀಯ ಭವಿಷ್ಯ ಇಂದೇ ಮತಪೆಟ್ಟಿಗೆ ಸೇರಲಿದೆ. ಬೆಳಗ್ಗೆ ಬೇಗನೇ ಮತಗಟ್ಟೆಗೆ ಆಗಮಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಎಲ್​ಜೆಪಿ ನಾಯಕ ಚಿರಾಗ್ ಪಾಸ್ವಾನ್​, ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ತೇಜಪ್ರತಾಪ್​ ​ ಮತ್ತು ಅವರ ತಾಯಿ ರಾಬ್ಡಿ ದೇವಿ ಮತಚಲಾಯಿಸಿದರು.
ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 1,463 ಅಭ್ಯರ್ಥಿಗಳಿದ್ದಾರೆ. ಆರ್​ಜೆಡಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ 24, ಎಡ ಪಕ್ಷಗಳು 14, ಬಿಜೆಪಿ 46, ಜೆಡಿಯು 43 ಹಾಗೂ ವಿಐಪಿ 5 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವೈಶಾಲಿ ಜಿಲ್ಲೆಯ ರಘೋಪುರ್ ಕ್ಷೇತ್ರದಿಂದ ತೇಜಸ್ವಿ ಯಾದವ್ ಸ್ಪರ್ಧಿಸಿದ್ದು, ಅವರಿಗೆ ಪ್ರಬಲ ಎದುರಾಳಿಯಾಗಿ ಬಿಜೆಪಿಯಿಂದ ಸತೀಶ್ ಕುಮಾರ್ ಕಣದಲ್ಲಿದ್ದಾರೆ. ರಘೋಪುರ್ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಇದನ್ನೂ ಓದಿ:ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!
ಸಮಷ್ಟಿಪುರ ಜಿಲ್ಲೆಯ ಹಸನ್​ಪುರ್ ಕ್ಷೇತ್ರದಿಂದ ತೇಜ್ ಪ್ರತಾಪ್ ಯಾದವ್ ಕಣಕ್ಕಿಳಿದಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಎರಡು ಬಾರಿ ಶಾಸಕರಾಗಿರುವ ಜೆಡಿಯುನ ರಾಜ್ ಕುಮಾರ್ ಕಣದಲ್ಲಿದ್ದಾರೆ. ಪರ್ಸಾ ಕ್ಷೇತ್ರದಲ್ಲಿ ತೇಜ್ ಪ್ರಯಾಪ್ ಅವರ ಮಾವ, ಆರ್​ಜೆಡಿಯಿಂದ ಜೆಡಿಯುಗೆ ಸೇರ್ಪಡೆಯಾಗಿರುವ ಚಂದ್ರಿಕಾ ರಾಯ್ ಸ್ಪರ್ಧೆಗಿಳಿದಿದ್ದಾರೆ. ಅವರ ಎದುರಾಳಿಯಾಗಿ ಆರ್​ಜೆಡಿಯಿಂದ ಚೊಟ್ಟೆ ಲಾಲ್ ಇದ್ದಾರೆ. (ಏಜೆನ್ಸೀಸ್)
ಎರಡು ಕ್ಷೇತ್ರಗಳ ಉಪಚುನಾವಣೆ: ಮಂದಗತಿಯಲ್ಲಿ ಶುರುವಾಗಿದೆ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
