ನವದೆಹಲಿ:ಬಿಹಾರ ಚುನಾವಣಾ ಕಣದಲ್ಲಿ ಮಹಾಮೈತ್ರಿಯ ಪ್ರಣಾಳಿಕೆ ಬಿಡುಗಡೆಯಾದ ಬೆನ್ನಿಗೆ, ಜಿನ್ನಾ ಸಿದ್ಧಾಂತದ ಪ್ರತಿಪಾದಕನ ಮಕ್ಸೂರ್ ಅಹ್ಮದ್ ಉಸ್ಮಾನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ಕಣದಲ್ಲಿ ಬಿಜೆಪಿ ಇದನ್ನೆ ಪ್ರಚಾರದ ಅಸ್ತ್ರವನ್ನಾಗಿ ಎತ್ತಿಕೊಂಡಿದ್ದು, ಕಾಂಗ್ರೆಸ್​ಗೆ ತಲೆನೋವು ತಂದೊಡ್ಡಿದೆ.
ಉಸ್ಮಾನಿ ಯಾರು?
ಅಲಿಗಢ ಮುಸ್ಲಿಂ ವಿವಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ. 2019ರಲ್ಲಿ ಉಸ್ಮಾನಿ ದೇಶ ವಿರೋಧಿ ಘೋಷಣೆ ಕೂಗಿದ್ದ ಕಾರಣ, ದೇಶದ್ರೋಹದ ಪ್ರಕರಣವೂ ದಾಖಲಾಗಿತ್ತು. ಈ ವರ್ಷ ಯುಎಪಿಎ ಟೀಕಿಸಿ ಬಂಧನಕ್ಕೆ ಒಳಗಾಗಿದ್ದ ಸಫೋರಾ ಝಾರ್ಗರ್ ಮತ್ತು ಮೀರನ್ ಹೈದರ್ ಪರವಾಗಿ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದರು. ಅಲ್ಲದೆ, ಟ್ವಿಟರ್ ಇವರ ಖಾತೆಯನ್ನು ಅಮಾನತುಗೊಳಿಸಿತ್ತು.
ಜಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉಸ್ಮಾನಿ, ಅಲಿಗಢ ಮುಸ್ಲಿಂ ವಿವಿಯ ಸ್ಟೂಡೆಂಟ್​ ಯೂನಿಯನ್ ನೇತಾರನಾಗಿದ್ದ. ಅಲ್ಲಿ ಜಿನ್ನಾ ಸಿದ್ಧಾಂತವನ್ನು ಪ್ರತಿಪಾದಿಸಿದ್ದ. ಅಲ್ಲದೆ ತನ್ನನ್ನು ತಾನು ಆಧುನಿಕ ಜಿನ್ನಾ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದ ಎಂಬ ವಿಚಾರಗಳೆಲ್ಲ ಈಗ ಮತ್ತೆ ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ:ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!
ಈ ಬಗ್ಗೆ ಕೇಂದ್ರ ಸಚಿವ ಗಿರಿರಾಜ ಸಿಂಗ್ ವ್ಯಂಗ್ಯವಾಡಿದ್ದು, ಶಾರ್ಜೀಲ್​ ಇಮಾಮ್​ ಆತನ ಕ್ಷೇತ್ರದಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿ ಬರುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಣ್​ದೀಪ್ ಸಿಂಗ್ ಸುರ್ಜೇವಾಲ, ಜಲೆ ಕ್ಷೇತ್ರದ ಅಭ್ಯರ್ಥಿಗೂ ಜಿನ್ನಾ ಸಿದ್ಧಾಂತಕ್ಕೂ ಸಂಬಂಧವೇ ಇಲ್ಲ. ವಾಸ್ತವದಲ್ಲಿ ಅಲಿಗಢ ಮುಸ್ಲಿಂ ವಿವಿಯಿಂದ, ಸಂಸತ್​ನಿಂದ ಮತ್ತು ಬಾಂಬೆ ಹೈಕೋರ್ಟ್​ನಿಂದ ಜಿನ್ನಾ ಫೋಟೋ ತೆಗೆಯುವ ವಿಚಾರವಾಗಿ ಉಸ್ಮಾನಿಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಆದರೆ, ಪ್ರಧಾನಿ ಯಾವತ್ತೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಬಿಜೆಪಿಯವರು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದಾರೆ. (ಏಜೆನ್ಸೀಸ್)
ಶಬರಿಮಲೆ ಮೇಲ್ಶಾಂತಿಯಾಗಿ ಜಯರಾಜನ್​ ಪೊಟ್ಟಿ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
