ಪಟನಾ:ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇವೆ. ಆಡಳಿತಾರೂಢ ಎನ್​ಡಿಎಯಲ್ಲಿ ಜೆಡಿಯುಗೆ ಸಿಕ್ಕ 122 ಸೀಟುಗಳ ಪೈಕಿ 7 ಸ್ಥಾನಗಳು ಜಿತನ್​ ರಾಮ್ ಮಾಂಜಿಯವರ ಹಿಂದುಸ್ಥಾನ್ ಅವಾಮ್​ ಮೋರ್ಚಾ (ಎಚ್​ಎಎಂ)ಗೆ ಸಿಕ್ಕಿದೆ. ಈಗಾಗಲೇ ಏಳು ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾಂಜಿ ಬಿಡುಗಡೆ ಮಾಡಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್​ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸೀಟು ಹಂಚಿಕೆ ವಿಚಾರ ಪ್ರಕಟಿಸಿದ್ದಾರೆ. ಇದೇ ವೇಳೆ, ಬಿಜೆಪಿಗೆ ಹಂಚಿಕೆಯಾಗಿರುವ 121 ಸೀಟುಗಳ ಪೈಕಿ ಕೆಲವನ್ನು ತಮಗೆ ನೀಡಬೇಕು ಎಂದು ವಿಕಾಸ್​ಶೀಲ್​ ಇನ್​ಸಾನ್ ಪಾರ್ಟಿ ನಾಯಕರು ಕೇಳಿಕೊಂಡಿದ್ದಾರೆ. ಈ ಸಂಬಂಧ ಮಾತುಕತೆ ಮುಂದುವರಿದಿದೆ. ಅಕಸ್ಮಾತ್​ ಅದು ಫಲಪ್ರದವಾದರೆ ಸೀಟು ಹಂಚಿಕೆ ವಿವರ ಬಹಿರಂಗವಾಗಲಿದೆ ಎಂದು ನಿತೀಶ್ ತಿಳಿಸಿದ್ದಾರೆ.
ಇದನ್ನು ಓದಿ:ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್​, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?
ಬಿಹಾರದ ಮಟ್ಟಿಗೆ ಲೋಕಜನ ಶಕ್ತಿ ಪಾರ್ಟಿ (ಎಲ್​ಜೆಪಿ) ಎನ್​ಡಿಎಯಿಂದ ಹೊರಬಿದ್ದಿದ್ದು, ಜೆಡಿಯು ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದೆ. ಇಂದು ಬೆಳಗ್ಗೆ ಬಿಜೆಪಿಯ ಬಿಹಾರ ರಾಜ್ಯ ಅಧ್ಯಕ್ಷ ಭೂಪೇಂದ್ರ ಯಾದವ್​ ಮತ್ತು ಪಕ್ಷದ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನಾವೀಸ್ ಮತ್ತು ಹಿರಿಯ ನಾಯಕರು ನಿತೀಶ್ ಕುಮಾರ್ ನಿವಾಸದಲ್ಲಿ ಕೆಲಹೊತ್ತು ಸಭೆ ನಡೆಸಿದ್ದರು. ಮೂರು ಹಂತಗಳ ಮತದಾನದ ಪೈಕಿ ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆಯಲಿದೆ. (ಏಜೆನ್ಸೀಸ್)
ಕೇರಳ ಚಿನ್ನ ಕಳ್ಳಸಾಗಣೆ ಕೇಸ್​ ಆರೋಪಿಗಳಾದ ಫರೀದ್​, ರಾಬಿನ್ಸ್ ದುಬೈನಲ್ಲಿ ಅರೆಸ್ಟ್: ಸ್ವಪ್ನಾಗೆ ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + six =
Remember me
