ಬಿಹಾರ:ದೇವಸ್ಥಾನವೊಂದರ ಆಡಳಿತಾಧಿಕಾರಿಯೊಬ್ಬರು ಭಕ್ತರಿಗೆ ಪ್ರವಚನ ನೀಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ಆ ಕ್ಷಣಗಳ ದೃಶ್ಯಾವಳಿ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಬಿಹಾರದ ಸರಣ್ ಜಿಲ್ಲೆಯ ಮಾರುತಿ ಮಾನಸ್ ಮಂದಿರದ ಆಡಳಿತಾಧಿಕಾರಿ ರಂಜಯ್ ಸಿಂಗ್ ಸಾವಿಗೀಡಾದವರು. ನಿವೃತ್ತ ಪ್ರೊಫೆಸರ್ ಆಗಿರುವ ಇವರು ಭಾನುವಾರ ಸಂಜೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರವಚನ ನೀಡುತ್ತಿರುವಾಗ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕುಸಿದು ಬಿದ್ದ ಇವರನ್ನು ದೇವಳದಲ್ಲಿ ಇದ್ದ ಇತರರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅವರು ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದ ಇವರು, ಈ ದೇವಸ್ಥಾನದ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು, ದೇವಸ್ಥಾನ ಆಡಳಿತಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಆಗಿದ್ದು, ಪ್ರತಿ ಸಂಜೆ ಪ್ರವಚನ ನೀಡುತ್ತಿದ್ದರು.
ದೀಪಾವಳಿ ಸಂದರ್ಭ ಬೈಗುಳಕ್ಕೆ ಒಳಗಾಗ್ತಿದ್ದ ಕೊಹ್ಲಿಗೆ ಈ ಬಾರಿ ಭರ್ಜರಿ ಪ್ರಶಂಸೆ; ಬೈದವರೇ ಹೊಗಳುತ್ತಿದ್ದಾರೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
