ಪಟನಾ:ಕೋವಿಶೀಲ್ಡ್​ ಲಸಿಕೆಯ ಮೊದಲನೇ ಡೋಸೇಜ್​ ತೆಗೆದುಕೊಂಡ ನಂತರ ಎರಡನೇ ಡೋಸೇಜ್​ಗೆ 84 ದಿನಗಳು ಆಗಿರಬೇಕೆನ್ನುವ ನಿಯಮವಿದೆ. ಹಾಗೆಯೇ ಕೋವಿಶೀಲ್ಡ್​ ಪಡೆದವರು ಕೊವ್ಯಾಕ್ಸಿನ್​ ಪಡೆಯುವಂತಿಲ್ಲ ಎನ್ನುವ ನಿಯಮವೂ ಇದೆ. ಆದರೆ ಇಲ್ಲಿ ನರ್ಸ್​ಗಳು ಮಾಡಿರುವ ತಪ್ಪಿಗೆ ಮಹಿಳೆಯೊಬ್ಬಳು ಕೋವಿಶೀಲ್ಡ್​ ಲಸಿಕೆ ಪಡೆದ ಕೇವಲ ಐದು ನಿಮಿಷಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಗ್ರಾಮೀಣ ಪಟನಾದ ಪುನ್‌ಪುನ್ ಬ್ಲಾಕ್‌ನಲ್ಲಿರುವ ಹಳ್ಳಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೂನ್ 16ರಂದು ಸುನೀಲಾ ದೇವಿ ಹೆಸರಿನ ಮಹಿಳೆ ಕರೊನಾ ಲಸಿಕೆ ಪಡೆಯಲೆಂದು ಲಸಿಕಾ ಕೇಂದ್ರಕ್ಕೆ ತೆರಳಿದ್ದಾಳೆ. ಅಲ್ಲಿ ರಿಜಿಸ್ಟರ್​ ಮಾಡಿದ ನಂತರ ನರ್ಸ್​ ಒಬ್ಬರು ಆಕೆಗೆ ಕೋವಿಶೀಲ್ಡ್​ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು, ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ವಿಶ್ರಾಂತಿ ಪಡೆಯುತ್ತ ಕುಳಿತಿದ್ದ ಮಹಿಳೆಯ ಬಳಿ ಬಂದ ಇನ್ನೊಬ್ಬ ನರ್ಸ್​ ಕೊವ್ಯಾಕ್ಸಿನ್ ಲಸಿಕೆಯನ್ನು ಮಹಿಳೆಗೆ ನೀಡಲು ಮುಂದಾಗಿದ್ದಾರೆ. ಇಲ್ಲ, ನಾನು ಈಗಾಗಲೇ ಲಸಿಕೆ ತೆಗೆದುಕೊಂಡಾಯಿತು ಎಂದರೂ ಕೇಳದ ನರ್ಸ್​ ಈ ಲಸಿಕೆಯನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿ ಲಸಿಕೆ ಚುಚ್ಚಿದ್ದಾಳೆ.
ಈ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಈ ರೀತಿ ನನಗೆ ಎರಡೆರೆಡು ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸುನೀಲಾ ದೇವಿ ಒತ್ತಾಯಿಸಿದ್ದಾರೆ. ಅಂದು ಅಲ್ಲಿ ಕೆಲಸ ಮಾಡಿದ್ದ ಚಂಚಲ ದೇವಿ ಮತ್ತು ಸುನೀತಾ ಕುಮಾರಿ ಹೆಸರಿನ ನರ್ಸ್​ಗಳಿಗೆ ನೋಟಿಸ್​ ಜಾರಿಗೊಳಿಸಲಾಗಿದೆ. ಸದ್ಯ ಸುನೀಲಾ ದೇವಿಯನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿಡಲಾಗಿದೆ. (ಏಜೆನ್ಸೀಸ್)
ಲಹರಿ ಮೂಡ್​ನಲ್ಲಿ ಬಿಎಸ್​ವೈ; ಲಕ್ಷ್ಮಣ್​ ಸವದಿಗೆ ಕಾದಿದೆಯಾ ಆಪತ್ತು?

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
