ಪಟನಾ:ವೈರಲ್​​ ಹಾಡಿಗೆ ಇನ್​ಸ್ಟಾಗ್ರಾಂ ರೀಲ್ಸ್​ ಮಾಡಲು ಬಿಡಲಿಲ್ಲ ಅಂತ ಮಹಿಳೆಯೊಬ್ಬಳು ತನ್ನ ಸಹೋದರಿಯರೊಂದಿಗೆ ಸೇರಿ ಗಂಡ ಕತ್ತು ಹಿಸುಕಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದ ಬೆಗುಸರಯ್​ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಹೇಶ್ವರ್​ ಕುಮಾರ್​ ರೈ (25) ಎಂದು ಗುರುತಿಸಲಾಗಿದೆ. ಆತನ ಪತ್ನಿ ರಾಣಿ ಕುಮಾರಿ, ಆಕೆಯ ಇಬ್ಬರು ಸಹೋದರಿಯರನ್ನು ಬಂಧಿಸಲಾಗಿದೆ. ಏಳು ವರ್ಷಗಳ ಹಿಂದೆಯೇ ಮಹೇಶ್ವರ್​ ಮತ್ತು ರಾಣಿ ಕುಮಾರಿ​ ನಡುವೆ ಮದುವೆ ನಡೆದಿತ್ತು. ಮೃತ ಮಹೇಶ್ವರ್​ ಸಮಸ್ತಿಪುರ ಜಿಲ್ಲೆಯ ನರ್ಹಾನ್ ಗ್ರಾಮದ ನಿವಾಸಿ. ಕೋಲ್ಕತದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಮನೆಗೆ ಮರಳಿದ್ದ.
ರಾಣಿ ಕುಮಾರಿ ಯಾವಾಗಲೂ ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವುದರಲ್ಲಿ ಬಿಜಿಯಾಗಿರುತ್ತಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಗಂಡ, ರೀಲ್ಸ್​ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯ ಮಾಡುತ್ತಿದ್ದನು. ಆದರೆ, ರೀಲ್ಸ್​ ಅನ್ನೇ ತನ್ನ ಜೀವಾಳ ಅಂದುಕೊಂಡಿದ್ದ ರಾಣಿ ಕುಮಾರಿ ಸಂಚು ಮಾಡಿ ತನ್ನ ಪತಿಯ ಉಸಿರನ್ನೇ ನಿಲ್ಲಿಸಿದ್ದಾಳೆ.
ಖೋಡಬಂದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಫಫೌತ್ ಗ್ರಾಮದಲ್ಲಿ ಜನವರಿ 7ರಂದು ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿ ರಾಣಿ ಕುಮಾರಿ ಫಫೌತ್ ಗ್ರಾಮದವಳು. ಮಹೇಶ್ವರ್​ ಫಫೌತ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಭೀಕರತೆ ನಡೆದಿದೆ. ಇನ್‌ಸ್ಟಾಗ್ರಾಂ ರೀಲ್‌ಗಳ ವಿಚಾರವಾಗಿ ಆತನ ಮತ್ತು ಪತ್ನಿಯ ನಡುವೆ ವಾಗ್ವಾದ ನಡೆದಿದ್ದು, ರಾಣಿ ಕುಮಾರಿ ಮತ್ತು ಆಕೆಯ ಸಹೋದರಿಯರು ಮಹೇಶ್ವರನ ಕತ್ತು ಹಿಸುಕಿ ಕೊಂದಿದ್ದಾರೆ. ರಾತ್ರಿಯ ವೇಳೆ ಮೃತನ ಸಹೋದರ ಕೋಲ್ಕತ್ತಾದಿಂದ ಕರೆ ಮಾಡಿದಾಗ ಬೇರೊಬ್ಬರು ಫೋನ್​ ಸ್ವೀಕರಿಸಿದ್ದರಿಂದ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ..ಪೊಲೀಸರು ಮೃತ ದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹೇಶ್ವರ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಮೃತನ ಪತ್ನಿಯನ್ನು ಮತ್ತು ಸಹೋದರಿಯರನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
“ಸೂರ್ಯವಂಶ” ನಟಿಯಿಂದ ನಾನು ದೂರವಾಗಿದ್ದೇನೆ: ಇಶಾ ಕೊಪ್ಪಿಕರ್ ಮಾಜಿ ಪತಿ

‘ಆರ್​​ಸಿಬಿ ಪರ ಆಡೋಕೆ ಇಷ್ಟವಿರಲಿಲ್ಲ, ಬೆದರಿಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ್ರು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
