ಬಿಹಾರ:ಶಸ್ತ್ರಾಧಾರಿಯಾಗಿ ಬ್ಯಾಂಕ್ ದರೋಡೆ ಮಾಡಲು ಬಂದಿದ್ದ ಮೂವರನ್ನು, ಇಬ್ಬರು ಮಹಿಳಾ ಕಾನ್​​ಸ್ಟೇಬಲ್​ಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಕಾನ್​​ಸ್ಟೇಬಲ್​ಗಳಿಬ್ಬರು ದರೋಡಲು ಯತ್ನಿಸಿದ್ದವರನ್ನು ಹೊಡೆದಾಡಿ ತಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬ್ಯಾಂಕ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, ಬ್ಯಾಂಕಿನ ಕಾವಲುಗಾರರಾಗಿದ್ದ ಮಹಿಳಾ ಕಾನ್‌ಸ್ಟೆಬಲ್‌ಗಳು ಯಾವುದೇ ಹಿಂಜರಿಕೆಯಿಲ್ಲದೆ ಅವರೊಂದಿಗೆ ಹೋರಾಡಿದ್ದಾರೆ. ಇವರು ದರೋಡೆ ಮಾಡಲು ಬಂದವರ ವಿರುದ್ಧ ಹೋರಾಡಿ, ತಡೆದಿರುವ ದೃಶ್ಯ ಅಲ್ಲೇ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೂಹಿ ಕುಮಾರಿ ಮತ್ತು ಶಾಂತಿ ಎಂಬುವವರು ಸಾಹಸ ಪ್ರದರ್ಶಿಸಿದ ಮಹಿಳಾ ಕಾನ್​​ಸ್ಟೇಬಲ್ ಎಂದು ವರದಿಯಾಗಿದೆ. ಈ ಘಟನೆ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಂದುರಿ ಚೌಕ್‌ನಲ್ಲಿ ನಡೆದಿದೆ.
ಮುಸುಕು ಹಾಕಿಕೊಂಡು ಬ್ಯಾಂಕ್​ಗೆ ನುಸುಳಲು ಯತ್ನಿಸಿದ್ದಾರೆ. ಈ ವೇಳೆ ಭಧ್ರತಾ ಸಿಬ್ಬಂದಿ ಅನುಮಾನ ಬಂದು ದಾಖಲೆಗಳನ್ನು ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಮುಸುಕುದಾರಿ ತನ್ನಲ್ಲಿದ್ದ ಪಿಸ್ತೂಲನ್ನು ಹೊರತೆಗೆದು ಬೆದರಿಸಿದ್ದಾನೆ. ಅಲ್ಲದೇ ಮಹಿಳಾ ಕಾನ್​​ಸ್ಟೇಬಲ್​ಗಳ ಬಳಿಯಿದ್ದ ಬಂದೂಕನ್ನು ಕಸಿಯಲು ಯತ್ನಿಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದೆ ಎಂದಾಗ ಅಂಜದ ಮಹಿಳಾ ಕಾನ್​ಸ್ಟೇಬಲ್​ಗಳು ದರೋಡೆಕೋರರ ವಿರುದ್ಧ ಹೋರಾಡಿದ್ದಾರೆ. ಅಂತಿಮವಾಗಿ ಕಾನ್​​ಸ್ಟೇಬಲ್​ಗಳನ್ನು ಎದುರಿಸಲು ವಿಫಲರಾದ ಖದೀಮರು ಸ್ಥಳದಿಂದ ಓಡಿ ಹೋಗಲು ನಿರ್ಧರಿಸಿದ್ದಾರೆ. ಈ ವೇಳೆ ಕಾನ್​ಸ್ಟೇಬಲ್ ಜೂಹಿ ಕುಮಾರಿ, ಗುಂಡು ಹಾರಿಸಿದ್ದಾರೆ.
ಈ ಬಗ್ಗೆ ಜೂಹಿ ಕುಮಾರಿ ಪ್ರತಿಕ್ರಿಯಿಸಿದ್ದು ಮುಂಜಾನೆ 11 ಗಂಟೆಯ ಸುಮಾರಿಗೆ ಬ್ಯಾಂಕ್ ದರೋಡೆ ಮಾಡಲು ಖದೀಮರು ಬಂದಿದ್ದರು. ಅನುಮಾನ ಬಂದು ಪ್ರಶ್ನಿಸಿದಾಗ ಪಿಸ್ತೂಲ್ ಹೊರತೆಗೆದಿದ್ದಾರೆ. ಘಟನೆಯಲ್ಲಿ ನನ್ನ ಕೈ ಹಾಗೂ ಹಲ್ಲಿಗೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಮಹಿಳಾ ಕಾನ್​​ಸ್ಟೇಬಲ್​ಗಳ ಸಾಹಸ ಪ್ರಶಂಸನೀಯ. ಇಬ್ಬರಿಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + two =
Remember me
