ಬೆಂಗಳೂರು:ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಪ್ರಾಂಶುಪಾಲರ ಜತೆ ಮಹಿಳೆಯೊಬ್ಬರು ವಾಗ್ವಿವಾದಕ್ಕೆ ಇಳಿದ ಕಾರಣ ಪ್ರಾಂಶುಪಾಲರು ಆ ಮಹಿಳೆಗೆ ಕಪಾಳ ಮೋಕ್ಷ ಮಾಡಿರುವ ಬಗ್ಗೆ ವಾಟ್ಸ್‌ಆ್ಯಪ್‌ ಸಂದೇಶಗಳು ಹರಿದಾಡುತ್ತಿವೆ.
ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಶಾಲೆಯು ಮುಚ್ಚಿರುವಾಗ ಅದರ ಲೈಬ್ರರಿಯನ್ನೂ ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಿಲ್ಲ, ಆದರೂ ವಿದ್ಯಾರ್ಥಿಗಳಿಂದ ‘ಏಕೆ ಗ್ರಂಥಾಲಯ ಶುಲ್ಕ, ಆ ಶುಲ್ಕ, ಈ ಶುಲ್ಕ ಎಂದು ವಸೂಲು ಮಾಡುತ್ತಿದ್ದೀರಿ ಎಂದು ಪ್ರಿನ್ಸಿಪಾಲ್‌ಗೆ ಮಹಿಳೆ ಬೈಯುತ್ತಿದ್ದು, ಇದು ಅತಿರೇಕಕ್ಕೆ ಹೋದಾಗ ಪ್ರಾಂಶುಪಾಲರು ಆ ಮಹಿಳೆಗೆ ಹೊಡೆಯುವ ದೃಶ್ಯ ಇದಾಗಿದೆ.
https://www.facebook.com/VVani4U/videos/2615080615379662/
ಇದು ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯಲ್ಲಿ ನಡೆದಿರುವ ಘಟನೆ ಎಂಬ ಕ್ಯಾಪ್ಷನ್‌ ಜತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯ ಡಾ. ಲಾವಣ್ಯ ಮಿತ್ರನ್ ತಮ್ಮ ಶಾಲೆಯ ಘಟನೆ ಇಲ್ಲ, ವಿನಾಕಾರಣ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಶಾಲೆಯ ಹೆಸರನ್ನು ಬಳಸಿಕೊಳ್ಳಲಾಗಿದೆ. ನಮ್ಮ ಶಾಲೆಯು ಯಾವಾಗಲೂ ಸಾಮಾಜಿಕ ಮೌಲ್ಯ ಮತ್ತು ವಿದ್ಯಾರ್ಥಿಗಳ ರಕ್ಷಣೆಗೆ ಮಹತ್ವ ನೀಡುತ್ತಿದೆ. ಎಲ್ಲಿಯೋ ನಡೆದಿರುವ ಘಟನೆಯನ್ನು ನಮ್ಮ ಶಾಲೆಯಲ್ಲಿಯೇ ನಡೆದಿದೆ ಎಂದು ಬಿಂಬಿಸುತ್ತಿರುವುದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಹಿಂದಿ ಭಾಷೆ ಮಾತನಾಡುವುದು ಕಾಣಬಹುದಾಗಿದೆ. ವಾಸ್ತವಿಕವಾಗಿ ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದ ಶಾಲೆಯೊಂದರಲ್ಲಿ. ಅಲ್ಲಿಯ ಮಹಿಳೆ ಮತ್ತು ಪ್ರಾಂಶುಪಾಲರ ನಡುವೆ ಶುಲ್ಕದ ವಿಷಯವಾಗಿ ಜಗಳವಾಗಿದ್ದು, ಪ್ರಾಂಶುಪಾಲರು ಮಹಿಳೆಯ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಅಲ್ಲಿಯೇ ಇರುವವರು ವಿಡಿಯೋ ಮಾಡಿ, ಶೇರ್‌ ಮಾಡಿದ್ದಾರೆ.
ಆದರೆ ಕ್ಯಾಪ್ಷನ್‌ನಲ್ಲಿ ಇದು ನಡೆದಿರುವುದು ಬೆಂಗಳೂರಿನ ಸೇಂಟ‌ ಮಾರ್ಕ್ಸ್‌ ರಸ್ತೆಯಲ್ಲಿರುವ ಬಿಷಪ್‌ ಕಾಟನ್‌ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಎಂದು ಬರೆಯಲಾಗಿದೆ.ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವಾರು ಪಾಲಕರು ತಮಗೆ ದೂರು ನೀಡಿರುವುದಾಗಿ ವಣ್ಯ ಮಿತ್ರನ್ ಹೇಳಿದ್ದಾರೆ.(ಏಜೆನ್ಸೀಸ್‌)
ಟೊಮ್ಯಾಟೊ ಪ್ರಿಯರಿಗೆ ಶಾಕ್‌! ಗಗನಕ್ಕೇರಿತು ಬೆಲೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + one =
Remember me
