ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಇಂದು ಸಂಭವಿಸಿದ ಭೀಕರ ಘಟನೆಯ ದೃಶ್ಯ ವೈರಲ್​ ಆಗಿದ್ದು, ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನುತ್ತೆ. ಥೂ, ಇವನೆಂಥಾ ಕ್ರೂರಿ, ಮನುಷ್ಯತ್ವ ಇಲ್ವಾ? ಎಂದು ಶಪಿಸುತ್ತಾ ಆರೋಪಿಗೆ ತಕ್ಕಶಿಕ್ಷೆ ಆಗಬೇಕು ಎಂದು ಮನದಲ್ಲೇ ಆಗ್ರಹಿಸುತ್ತೀರಿ.
ಏನಿದು ಘಟನೆ?:ಮಾಗಡಿ ಮುಖ್ಯರಸ್ತೆಯ ಟೋಲ್​ಗೇಟ್​ ಬಳಿ ಮಂಗಳವಾರ ಮಧ್ಯಾಹ್ನ ಟಾಟಾ ಸುಮೋ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಮುತ್ತಪ್ಪ(71) ಇದನ್ನು ಪ್ರಶ್ನಿಸುತ್ತಿದ್ದಂತೆ ದ್ವಿಚಕ್ರ ವಾಹನ ಸವಾರ ಸಾಹಿಲ್​(25) ಎಸ್ಕೇಪ್​ ಆಗಲು ಮುಂದಾಗಿದ್ದಾನೆ. ಈ ವೇಳೆ ದ್ವಿಚಕ್ರ ವಾಹನದ ಹಿಂಬದಿಯನ್ನ ಗಟ್ಟಯಾಗಿ ಹಿಡಿದ ಕಾರು ಚಾಲಕ, ಸಾಹಿಲ್​ಗೆ ನಿಲ್ಲುವಂತೆ ಕೂಗಿದ್ದಾರೆ. ಮಾನವೀಯತೆ ಮರೆತು ಸ್ಕೂಟರ್​ ಅನ್ನು ಸ್ಪೀಡಾಗಿ ಚಲಾಯಿಸಿಕೊಂಡು ಸವಾರ ಹೋಗಿದ್ದು, ವೃದ್ಧ ಮುತ್ತಪ್ಪರನ್ನು ಸ್ಕೂಟರ್​ನಲ್ಲಿ ಕಿಲೋ ಮೀಟರ್​ ದೂರದವರೆಗೂ ಎಳೆದೊಯ್ದಿದ್ದಾನೆ. ರಸ್ತೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಇದನ್ನು ನೋಡಿ ಭಯಗೊಂಡಿದ್ದಾರೆ. ಹೊಸಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಾರ್ವಜನಿಕರು ಸ್ಕೂಟರ್​ ಅನ್ನು ತಡೆದು ಕಾರು ಚಾಲಕನ ಪ್ರಾಣ ಉಳಿಸಿದ್ದಾರೆ. ಸ್ಕೂಟರ್​ನಲ್ಲಿ ಒಂದು ಕಿ.ಮೀ. ದೂರ ಎಳೆದೊಯ್ಯಲ್ಪಟ್ಟ ವೃದ್ಧ ಮುತ್ತಪ್ಪರನ್ನು ಗಾಯತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಹಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹೇಳಿದ್ದೇನು?:ಮನುಷ್ಯತ್ವವೇ ಇಲ್ಲದಂತೆ ಕ್ರೂರವಾಗಿ ನಡೆದುಕೊಂಡ ಸ್ಕೂಟರ್​ ಚಾಲಕ ಸಾಹಿಲ್ ನಾಯಂಡಹಳ್ಳಿ ನಿವಾಸಿ. ವಿಚಾರಣೆ ವೇಳೆ ಪೊಲೀಸರ ಬಳಿ ಈತ ಹೇಳಿದ್ದೇನು ಗೊತ್ತಾ? ‘ನಾನು ಯಾವುದೇ ರಾಂಗ್ ರೂಟ್​ನಲ್ಲಿ ಬರ್ಲಿಲ್ಲ. ಕಾರಿಗೆ ಡಿಕ್ಕಿ ಹೊಡೆದಿದ್ದು ನಿಜ, ನನ್ನ ಗಾಡಿಗೂ ಡ್ಯಾಮೇಜ್ ಆಗಿದೆ. ನನಗೆ ಹೊಡೆಯುತ್ತಾರೆ ಎಂಬ ಭೀತಿಯಿಂದ ನಾನು ಸ್ಕೂಟರ್ ಸಮೇತ ತಪ್ಪಿಸಿಕೊಳ್ಳುತ್ತಿದ್ದೆ. ಅವ್ರು ನನ್ನ ಗಾಡಿಯನ್ನ ಹಿಡಿದುಕೊಂಡುಬಿಟ್ರು, ಅಲ್ಲಿರೋರು ನನಗೆ ಹೊಡೆಯೋಕೆ ಬಂದ್ರು. ನಾನು ಗಾಡಿ ಮೂವ್​ ಮಾಡಿದೆ. ಅವ್ರು ಕೈ ಬಿಡ್ತಾರೆ ಅನ್ಕೊಂಡೆ ಬಿಟ್ಟಿಲ್ಲ. ಅದ್ಕೆ ಸ್ವಲ್ಪ ಸ್ಪೀಡಾಗಿ ಹೋದೆ. ಆದ್ರೂ ಅವ್ರು ಬಿಟ್ಟಿಲ್ಲ, ಗಾಡಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ಬಂದ್ಬಿಟ್ರು. ನಾನು ಭಯದಿಂದ ಆ ರೀತಿ ಮಾಡಿದ್ದೇನೆ’ ಎಂದಿದ್ದಾನೆ.
ಅಬ್ಬಾ, ಜನ ಹೊಡೀತಾರೆ ಅಂತ ಇನ್ನೊಬ್ಬರ ಪ್ರಾಣವನ್ನ ಬಲಿ ಕೊಡ್ತಾರಾ? ಅದೂ ಒಂದೂವರೆ ಕಿ.ಮಿ.ದೂರದವರೆಗೂ ನಡುರಸ್ತೆಯಲ್ಲಿ ಅಮಾನವೀಯವಾಗಿ ವೃದ್ಧರೊಬ್ಬರ ಪ್ರಾಣವನ್ನೂ ಲೆಕ್ಕಿಸದೆ ಕ್ರೂರತ್ವದಿಂದ ವರ್ತಿಸ್ತಾರಾ? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆರೋಪಿ ಸಾಹಿಲ್​ ವಿರುದ್ಧ ವಿಜಯನಗರ ಠಾಣೆ ಮತ್ತು ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಕೇಸ್​ ದಾಖಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಮುತ್ತಪ್ಪರ ಯೋಗಕ್ಷೇಮ ವಿಚಾರಿಸಿದರು. ಆತನಿಗೆ ಮಾನವೀಯತೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಕಿಲೋ ಮೀಟರ್ ದೂರ ಎಳೆದೊಯ್ಯುತ್ತಿರಲಿಲ್ಲ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ತೀವಿ. ಮುತ್ತಪ್ಪರ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದು ಸಚಿವರು ಹೇಳಿದರು.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಚಾಲಕನೊಬ್ಬನನ್ನು ಎಳೆದೊಯ್ದ ಬೈಕ್ ಸವಾರ#Bengalurupic.twitter.com/AO6eIdmnT2
— Vijayavani (@VVani4U)January 17, 2023

VIDEO | 1 ಕಿ.ಮೀ ದೂರ ವ್ಯಕ್ತಿಯನ್ನು ಎಳೆದೊಯ್ದ ಬೈಕ್ ಸವಾರ; ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ

VIDEO | ಗೆಳೆಯನನ್ನು ಬಿಟ್ಟು ಹೊದಿಕೆಯನ್ನು ವಿವಾಹವಾದ ಬ್ರಿಟಿಷ್ ಮಹಿಳೆ! ಏನಿದು ವಿಚಿತ್ರ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 3 =
Remember me
