ಛತ್ತೀಸಗಢ:ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿರುತ್ತವೆ. ಈ ರೀಲ್ಸ್​​ ಮಾಡಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ರೀಲ್ಸ್​​ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ.
ಅಶುತೋಷ್‌ ಸಾವೊ (20) ಮೃತ ವಿದ್ಯಾರ್ಥಿ. ಬಿಲಾಸಪುರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಮೊದಲನೇ ವರ್ಷ ಓದುತ್ತಿದ್ದ. ರೀಲ್ಸ್​​ ಮಾಡಲು ಹೋಗಿ  ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ
ಈತ ರೀಲ್ಸ್‌ ಮಾಡಲು ಐವರು ಸ್ನೇಹಿತರೊಂದಿಗೆ ಶುಕ್ರವಾರ ಮಧ್ಯಾಹ್ನ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್‌ ಗೋಡೆ ಮೇಲೆ ನಿಂತು, ಕಿಟಕಿಯ ಕಂಬಿ ಮೇಲೆ ಹಾರಿದ್ದಾನೆ. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ.20 ಅಡಿ ಎತ್ತರದಿಂದ ಬಿದ್ದ ಕಾರಣ ತಲೆಗೆ ತೀವ್ರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಏಷ್ಯಾದಲ್ಲೇ ಮೊದಲು; ಎರಡೂ ತೋಳುಗಳ ಯಶಸ್ವಿ ಶಸ್ತ್ರ ಚಿಕಿತ್ಸೆ!
ಬಿಲಾಸ್‌ಪುರ ಪಟ್ಟಣದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ಮೃತನ ಸ್ನೇಹಿತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
आज बिलासपुर साइंस कॉलेज परिसर में दोस्तों के साथ इंस्टाग्राम रिल्स वीडियो बनाने के दौरान एक युवक छज्जे से पैर फिसलने से नीचे गिर पड़ा (ऑरेंज टी-शर्ट में), जिसे बचाया न जा सका। घटना में जांच जारी। घटना से पहले का वीडियो 👇 हर समय सतर्कता जरूरी,#SafetyFirst.pic.twitter.com/nzbmPqkcnd
— Santosh Singh (@SantoshSinghIPS)March 17, 2023

ಅದ್ಧೂರಿ ಮದುವೆ; ರಾತ್ರಿ ಇಡೀ 28 ಕಿ.ಮೀ​ ನಡೆದು ಮಂಟಪಕ್ಕೆ ಬಂದ ವರ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + thirteen =
Remember me
