ನವದೆಹಲಿ: ಗರ್ಭಪಾತ ಮಾಡಿಸುವುದಕ್ಕೆ ಅವಕಾಶ ನೀಡುವ ಗರಿಷ್ಠ ಅವಧಿಯ ಮಿತಿಯನ್ನು ಈಗ ಇರುವ 20 ವಾರಗಳಿಂದ 24 ವಾರಗಳಿಗೆ ಏರಿಸುವ ಮಹತ್ವದ ಮಸೂದೆಯನ್ನು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಇಂದು ದ ಮೆಡಿಕಲ್ ಟರ್ಮಿನೇಷನ್​ ಆಫ್ ಪ್ರೆಗ್ನೆನ್ಸಿ(ಅಮೆಂಡಮೆಂಟ್​) ಬಿಲ್ 2020 ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ವಿಚಾರದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಮಾತಿಗೆ ಅವಕಾಶ ಕೋರಿದಾಗ ಉಂಟಾದ ಗದ್ದಲದ ನಡುವೆಯೇ ಈ ಮಸೂದೆ ಮಂಡನೆ ಆಗಿದೆ.
ಸರ್ಕಾರ ಈ ಮಸೂದೆಗೆ ಕಳೆದ ತಿಂಗಳು ಅಂಕಿತ ಹಾಕಿತ್ತು. ಸುರಕ್ಷಿತ ಗರ್ಭಪಾತ ಮಾಡಿಸುವುದಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತು ಮಹಿಳೆಯರಿಗೆ ಅವರ ಶರೀರದ ಮೇಲಿನ ಪ್ರತ್ಯುತ್ಪಾದನಾ ಹಕ್ಕುಗಳನ್ನು ಖಾತರಿಗೊಳಿಸುವ ವಿಚಾರವಾಗಿ ಈ ಮಸೂದೆ ಸಹಕಾರಿ ಎಂದು ಸರ್ಕಾರ ಹೇಳಿಕೊಂಡಿದೆ.
ಅತ್ಯಾಚಾರ ಸಂತ್ರಸ್ತೆಯರಿಗೆ ಮತ್ತು ಅಪ್ರಾಪ್ತೆಯರಿಗೆ, ಅಂಗವೈಕಲ್ಯ ಹೊಂದಿದವರಿಗೆ ಮತ್ತು ತಾವು ಗರ್ಭ ಧರಿಸಿದ ವಿಚಾರ ಅರಿವಿಗೆ ಬಾರದೇ ಇದ್ದವರಿಗೆ ನೆರವಾಗುವ ದೃಷ್ಟಿಯಿಂದಲೂ ಕಾನೂನು ಅಂಶಗಳು ಹೊಸ ಮಸೂದೆಯಲ್ಲಿ ಸೇರ್ಪಡೆಗೊಂಡಿವೆ. (ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 6 =
Remember me
