ನವದೆಹಲಿ:ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ, ಬಿಲಿಯನೇರ್​ ಉದ್ಯಮಿ ಬಿಲ್​ಗೇಟ್ಸ್​ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತುಂಬ ಹೊಗಳಿದ್ದಾರೆ.
ಸಾಂಕ್ರಾಮಿಕ ಕರೊನಾ ವೈರಸ್​ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೀರಿ ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಬಿಲ್​ ಗೇಟ್ಸ್​, ನಿಮ್ಮ ನಾಯಕತ್ವವನ್ನು ನಾವೆಲ್ಲ ತುಂಬ ಮೆಚ್ಚಿಕೊಂಡಿದ್ದೇವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾಗಿ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ನಿಮ್ಮ ನಾಯಕತ್ವದ ಸರ್ಕಾರ, ಕರೊನಾ ವೈರಸ್​ ವಿರುದ್ಧ ಹೋರಾಡಲು, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು, ಸೋಂಕಿನ ಪ್ರಮಾಣ ಹೆಚ್ಚಾಗದಂತೆ ಮಾಡಲು ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ಮೆಚ್ಚಿದ್ದೇವೆ.ಲಾಕ್​ಡೌನ್​, ಕ್ವಾರಂಟೈನ್​, ಕರೊನಾ ಹಾಟ್​ಸ್ಫಾಟ್​​ಗಳನ್ನು ಗುರುತಿಸಿ ಟೆಸ್ಟಿಂಗ್​ ಪ್ರಮಾಣವನ್ನು ಹೆಚ್ಚಿಸಿದ್ದು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜನ ಮಾಡಿದ ರೀತಿ ತುಂಬ ಪರಿಣಾಮಕಾರಿಯಾಗಿದೆ ಎಂದು ಹೊಗಳಿದ್ದಾರೆ.
ಅಲ್ಲದೆ, ನಿಮ್ಮ ಸರ್ಕಾರ ಕೊವಿಡ್​-19ರ ವಿರುದ್ಧ ಹೋರಾಟಕ್ಕೆ ಡಿಜಿಟಲ್​ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಬಿಲ್​ ಗೇಟ್ಸ್​, ಕರೊನಾ ಸೋಂಕಿತರನ್ನು ಟ್ರೇಸ್​ ​ ಮಾಡಿ, ಅವರಿಗೆ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ರೂಪಿಸಲಾದ ಆರೋಗ್ಯ ಸೇತು ಆ್ಯಪ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ತಿಳಿಸಿದೆ.
ಭಾರತೀಯರಿಗೆ ಸಾಮಾಜಿಕ ರಕ್ಷಣೆಯನ್ನು ನೀಡುವ ಜತೆಗೆ ಸಾರ್ವಜನಿಕರ ಆರೋಗ್ಯ ಅಗತ್ಯಗಳನ್ನೂ ಪೂರೈಸುವ ಮೂಲಕ ಸಮತೋಲನ ಕಾಯ್ದುಕೊಳ್ಳುತ್ತಿದ್ದೀರಿ. ನಿಮಗೆ ಕೃತಜ್ಞತೆಗಳು ಎಂದು ಬಿಲ್​ ಗೇಟ್ಸ್​ ಪತ್ರದಲ್ಲಿ ಬರೆದಿದ್ದಾರೆ.ಕೊವಿಡ್​-19ನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿರುವ ವಿಶ್ವದ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಗ್ರಸ್ಥಾನದಲ್ಲಿ ಇದ್ದಾರೆಂದು ಅಮೆರಿಕದ ಸಂಸ್ಥೆ ಮಾರ್ನಿಂಗ್​ ಕನ್ಸಲ್ಟ್​ ಸಮೀಕ್ಷೆ ತಿಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
