ನವದೆಹಲಿ:ಭಾರತವು ಶ್ರೀಮಂತರ ವಲಸೆ ಪರ್ವಕ್ಕೆ ಸಾಕ್ಷಿಯಾಗಲಿದ್ದು, 2023ರಲ್ಲಿ ಸುಮಾರು 6,500 ಅಧಿಕ ಕೋಟ್ಯಧೀಶರು (ಎಚ್​ಎನ್​ಡಬ್ಲ್ಯುಐ) ವಲಸೆ ಹೋಗಲಿದ್ದಾರೆ ಎಂದು ಹೆನ್ಲಿ ಪ್ರೖೆವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ 2023 ಈ ಅಂಶವನ್ನು ದಾಖಲಿಸಿದೆ. ವಲಸೆ ವಿಚಾರದಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ. ಅದು ಈ ವರ್ಷ 13,500 ಎಚ್​ಎನ್​ಡಬ್ಲ್ಯುಐಗಳನ್ನು ಕಳೆದು ಕೊಳ್ಳುವ ನಿರೀಕ್ಷೆಯಿದೆ. ಚೀನಾದ ನಂತರದ ಸ್ಥಾನ ಭಾರತದ್ದಾಗಿದೆ. ಹೆನ್ಲಿ ಪ್ರೖೆವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ ಜಗತ್ತಿನಾದ್ಯಂತ ಸಂಪತ್ತು ಮತ್ತು ಹೂಡಿಕೆ ವಲಸೆಯನ್ನು ಟ್ರಾ್ಯಕ್ ಮಾಡುವ ಸಂಸ್ಥೆ ಇದಾಗಿದೆ.
1,22,000 ವಲಸೆ ನಿರೀಕ್ಷೆ:ಕಳೆದೊಂದು ದಶಕದಲ್ಲಿ ಕೋಟ್ಯಧೀಶರ ವಲಸೆ ಪ್ರಮಾಣ ಏರಿಕೆಯಾಗುತ್ತಿದೆ ಎಂದು ವರದಿ ಹೇಳಿದೆ. 2023ರಲ್ಲಿ ಜಾಗತಿಕವಾಗಿ 1,22,000 ಕೋಟ್ಯಧೀಶರು ವಲಸೆ ಹೋಗುವ ನಿರೀಕ್ಷೆಯಿದ್ದು, 2024ರಲ್ಲಿ ಇದು 1,28,000ಕ್ಕೆ ಏರುವ ಸಂಭವವಿದೆ. ದೇಶದಿಂದ ಸಿರಿವಂತರು ಹೊರಹೋಗುವ ಪ್ರಮಾಣದಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೂ ಕಳೆದ ವರ್ಷದಿಂದ ಅದರ ಸ್ಥಾನ ಸುಧಾರಿಸುವ ನಿರೀಕ್ಷೆಯಿದೆ. ಕಳೆದ ವರ್ಷ 7,500 ಮಿಲಿಯಾ ಧೀಶ್ವರರು ವಿದೇಶಗಳಿಗೆ ವಲಸೆ ಹೋಗಿದ್ದರು.
ಭಾರತದಿಂದ ವಲಸೆಯೇಕೆ?:ನಿರ್ಬಂಧಾತ್ಮಕ ತೆರಿಗೆ ಕಾನೂನುಗಳು, ಹೊರಹೋಗುವ ಪಾವತಿಗೆ ಸಂಬಂಧಿಸಿದ ಸುತ್ತುಬಳಸು ಹಾಗೂ ಸಂಕೀರ್ಣ ನಿಯಮಗಳು ಮೊದಲಾದವು ಭಾರತದಿಂದ ಮಿಲಿಯಾಧಿಪತಿಗಳ ವಲಸೆಗೆ ಕೆಲವು ಕಾರಣಗಳಾಗಿವೆ ಎಂಬುದು ಹೌರಾನಿಯಲ್ಲಿರುವ ಪ್ರೖೆವೇಟ್ ವೆಲ್ತ್ ಆಂಡ್ ಫ್ಯಾಮಿಲಿ ಆಫೀಸಸ್​ನ ಪಾಲುದಾರ ಸುನಿತಾ ಸಿಂಗ್ ದಲಾಲ್ ಅಭಿಮತವಾಗಿದೆ.
ಎಲ್ಲಿಗೆ ಪಯಣ?:ದುಬೈ ಮತ್ತು ಸಿಂಗಾಪುರ -ಇವೆರಡು ದೇಶಗಳು ವಲಸೆಗಾಗಿ ಶ್ರೀಮಂತ ಭಾರತೀಯ ಕುಟುಂಬದವರ ಮೆಚ್ಚಿನ ಗಮ್ಯ ತಾಣಗಳಾಗಿವೆ. ‘5ನೇ ಭಾರತೀಯ ನಗರ’ ಎಂದೂ ಕರೆಯಲಾಗುವ ದುಬೈ ಸರ್ಕಾರದ ಗೋಲ್ಡನ್ ವೀಸಾ ಕಾರ್ಯಕ್ರಮ, ಅನುಕೂಲಕರ ತೆರಿಗೆ ಪರಿಸರ, ಸದೃಢ ವ್ಯವಹಾರ ವ್ಯವಸ್ಥೆ ಮುಂತಾದವು ಭಾರತೀಯರ ಆಕರ್ಷಣೆಗೆ ಕಾರಣ. ಆಸ್ಟ್ರೇಲಿಯಾ (3,200) ಸಿಂಗಾಪುರ (3,200) ಮತ್ತು ಅಮೆರಿಕ (2,100) ಈ ವರ್ಷ ಹೆಚ್ಚು ಎಚ್​ಎನ್​ಡಬ್ಲ್ಯುಐಗಳನ್ನು ಆಕರ್ಷಿಸಲಿವೆ.
ನೂತನ ಶ್ರೀಮಂತರ ಸೃಷ್ಟಿ:ಕುಬೇರರು ಭಾರತ ಬಿಟ್ಟು ವಿದೇಶಗಳಲ್ಲಿ ನೆಲೆಸಲು ಹೋಗುವುದು ಕಳವಳದ ವಿಷಯವೇನೂ ಅಲ್ಲ. ಯಾಕೆಂದರೆ ವಲಸೆಯಿಂದ ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಅದು ಸಿರಿವಂತರನ್ನು ಸೃಷ್ಟಿಸುತ್ತದೆ ಎಂದು ನ್ಯೂ ವರ್ಲ್ಡ್ ವೆಲ್ತ್ ನ ಸಂಶೋಧನಾ ಮುಖ್ಯಸ್ಥ ಆಂಡ್ರ್ಯೂ ಅಮೊಲಿಸ್ ಅಭಿಪ್ರಾಯ ಪಟ್ಟಿದ್ದಾರೆ.
ವ್ಯಾಖ್ಯಾನ:10 ಲಕ್ಷ ಡಾಲರ್ (8,20,11,350 ರೂಪಾಯಿ) ಅಥವಾ ಅದಕ್ಕಿಂತ ಹೆಚ್ಚು ಸಂಪತ್ತನ್ನು ಹೂಡುವ ಸಾಮರ್ಥ್ಯವಿರುವ ಜನರನ್ನು ಕೋಟ್ಯಧೀಶರು ಅಥವಾ ಎಚ್​ಎನ್​ಡಬ್ಲ್ಯುಐ ಎಂದು ಹೆನ್ಲಿ ಆಂಡ್ ಪಾಟರ್°ರ್ಸ್ ವ್ಯಾಖ್ಯಾನಿಸಿದೆ.
ಈ ಕಾರ್ ‘ರೇಂಜೇ’ ಬೇರೆ!: ಬ್ಯಾಟರಿ ಫುಲ್ ಚಾರ್ಜ್ ಮಾಡಲು ಹತ್ತೇ ನಿಮಿಷ, ಒಮ್ಮೆ ಚಾರ್ಜ್​ ಮಾಡಿದ್ರೆ 1,200 ಕಿ.ಮೀ. ಪ್ರಯಾಣ!

ಸ್ಪೇಸ್​ಎಕ್ಸ್ ಇಂಜಿನಿಯರ್​ಗೆ ಲಿಂಕ್ಡ್​​ಇನ್​ನಲ್ಲಿ ‘ಸ್ಪೇಸ್’ ಇಲ್ಲ; 14ರ ಹರೆಯದಲ್ಲೇ ಭಾರಿ ಸಾಧನೆ ಮಾಡಿದಾತನ ಖಾತೆ ಬ್ಲಾಕ್​ ಮಾಡಿದ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 18 =
Remember me
