ನವದೆಹಲಿ:ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯ್ ಕೋಟಕ್ ಅವರ ಪುತ್ರ ಜೇ ಕೋಟಕ್ ಅವರು, 2015ರ ಫೆಮಿನಾ ಮಿಸ್ ಇಂಡಿಯಾ ವಿಜೇತ ಅದಿತಿ ಆರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅದಿತಿ ಆರ್ಯ ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಫೋಟೋವನ್ನು ಜೇ ಕೋಟಕ್ ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಳ್ಳವ ಮೂಲಕ ತಮ್ಮ ಸಂಬಂಧದ ಆರಂಭದ ಬಗ್ಗೆ ತಿಳಿಸಿದ್ದಾರೆ. ಅದಿತಿ ಆರ್ಯ ಪದವಿ ಪಡೆದಿರುವ ಹಂಚಿಕೊಂಡು ಅವರಿಗೆ ಅಭಿನಂದಿಸಿದ್ದಾರೆ. “ಅದಿತಿ, ನನ್ನ ಫಿಯಾನ್ಸಿ , ಇಂದು ಯೇಲ್ ವಿಶ್ವವಿದ್ಯಾನಿಲಯದಿಂದ ತನ್ನ ಎಂಬಿಎ ಪೂರ್ಣಗೊಳಿಸಿದ್ದಾಳೆ. ನಿಮ್ಮ ಬಗ್ಗೆ ಅಪಾರ ಹೆಮ್ಮೆ”, ಎಂದು ಬರೆದುಕೊಂಡಿದ್ದಾರೆ.
Aditi, my fiancée, completed her MBA from Yale University today. Immensely proud of you@AryaAditipic.twitter.com/xAdcRUFB0C
— Jay Kotak (@jay_kotakone)May 24, 2023
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚಬಲ್ಲರು!
ಕಳೆದ ವರ್ಷ, ಅವರಿಬ್ಬರೂ ಪ್ಯಾರಿಸ್‌ನ ಐಫೆಲ್ ಟವರ್‌ನ ಹೊರಗೆ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅವರ ನಿಶ್ಚಿತಾರ್ಥದ ವದಂತಿ ಕಾರಣವಾಗಿತ್ತು. ಆದರೆ, ಇದುವರೆಗೂ ಅವರಿಬ್ಬರೂ ನಿಶ್ಚಿತಾರ್ಥದ ಖಚಿತಪಡಿಸಿರಲಿಲ್ಲ.
ಅದಿತಿ ಆರ್ಯ ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬ್ಯುಸಿನೆಸ್ ಸ್ಟಡೀಸ್‌ನ ಪದವೀಧರರಾಗಿದ್ದು, ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಸಂಶೋಧನಾ ವಿಶ್ಲೇಷಕರಾಗಿದ್ದಾರೆ. 2015ರಲ್ಲಿ, ಅವರು ಸೌಂದರ್ಯ ಸ್ಪರ್ಧೆಯ 52 ನೇ ಆವೃತ್ತಿಯಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಪಡೆದರು.
ಜೇ ಕೋಟಕ್ ಅವರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಮಾಡಿದರು. ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಮುಗಿಸಿ. ಪ್ರಸ್ತುತ, ಅವರು ಕೋಟಕ್​​ನ 811 ನ ಉಪಾಧ್ಯಕ್ಷರಾಗಿದ್ದಾರೆ.
ಗ್ಯಾರಂಟಿಗಳನ್ನು ಕೊಡದಿದ್ದರೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ: ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
