ಬೆಂಗಳೂರು:ರಾಜಧಾನಿಯ ಬಯೋಕಾನ್​ ಸಂಸ್ಥೆ ಕೋವಿಡ್​ ರೋಗಿಳಿಗಾಗಿ ಹೊಸ ಲಸಿಕೆಯೊಂದನ್ನು ಕಂಡು ಹಿಡಿದಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿಯನ್ನು ಪಡೆದುಕೊಂಡಿದೆ.
ಇಟೋಲಿಜ್ಯುಮ್ಯಾಬ್​ (ಅಲ್ಜುಮ್ಯಾಬ್​) ಎಂದು ಕರೆಯಲಾಗುವ ಈ ಲಸಿಕೆಯನ್ನು ಬಯೋಕಾನ್​ನ ಬೆಂಗಳೂರು ಘಟಕದಲ್ಲಿಯೇ ಉತ್ಪಾದಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ;ಕೋವಿಡ್​ ಕೇರ್​ ಸೆಂಟರ್​ನಲ್ಲಿ ಹಾಸಿಗೆ ಹಂಚಿಕೆಗೆ ಕೇಂದ್ರಿಕೃತ ವ್ಯವಸ್ಥೆ; ಸಚಿವ ಸುಧಾಕರ್​ ಭರವಸೆ
ಕರೊನಾಗೆ ಲಸಿಕೆ ಕಂಡು ಹಿಡಿಯುವ ತನಕ ಇತರೆ ಜೀವರಕ್ಷಕ ಔಷಧಗಳ ಅಗತ್ಯವಿದೆ. ಅದರಂತೆ ಇಟೋಲಿಜ್ಯುಮ್ಯಾಬ್​ ಸೋಂಕಿನ ಲಕ್ಷಣ ಹೆಚ್ಚಾಗಿರುವ ಹಾಗೂ ಗಂಭೀರ ಪ್ರಕರಣಗಳಲ್ಲಿ ಅಂದರೆ ಶ್ವಾಸಕೋಶದ ಸೋಂಕು ಹೆಚ್ಚಾಗಿರುವವರಿಗೆ ಬಳಸಬಹುದಾಗಿದೆ ಎಂದು ಕಂಪನಿ ಮುಖ್ಯಸ್ಥೆ ಕಿರಣ್​ ಮಜುಮ್ದಾರ್​ ಷಾ ಹೇಳಿದ್ದಾರೆ.
ಇದರ ಒಂದು ವಾಯಲ್​ ಬೆಲೆ ಅಂದಾಜು 8 ಸಾವಿರ ರೂ.ಗಳಾಗಿದ್ದು, ಒಬ್ಬ ರೋಗಿಗೆ ಗರಿಷ್ಠ ನಾಲ್ಕು ವಾಯಲ್​ಗಳು ಬೇಕಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!
ಕರೊನಾ ಲಸಿಕೆ ಸಜ್ಜಾದರೂ ಸೋಂಕು ನಿಯಂತ್ರಣಕ್ಕೆ ಬಾರದೇ ಇರಬಹುದು. ಲಸಿಕೆ ಸಂಪೂರ್ಣ ಯಶಸ್ವಿಯಾಗದೇ ಇರಬಹುದು. ಹೀಗಾಗಿ ಎಲ್ಲ ಸಂಭಾವ್ಯತೆಗಳಿಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕಾಗಿದೆ ಎಂದು ಮಜುಮ್ದಾರ್​ ಷಾ ಹೇಳಿದ್ದಾರೆ.
ಕರೊನಾ ಲಸಿಕೆ ಯಶಸ್ವಿ ಎಂದು ಘೋಷಿಸಿದ ರಷ್ಯಾ ಮುಚ್ಚಿಟ್ಟಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
