ನವದೆಹಲಿ:ಅಭ್ಯರ್ಥಿ ಬದಲು ಬೇರೆಯವರು ಪರೀಕ್ಷೆ ಬರೆಯುವುದು ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರೀಕ್ಷೆಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಅಳವಡಿಸಲು ಯೋಜಿಸಿರುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಶನಿವಾರ ಹೇಳಿದೆ.
ದೇಶಾದ್ಯಂತ ಅಂದಾಜು 1,500 ಪರೀಕ್ಷಾ ಕೇಂದ್ರಗಳು ಮತ್ತು 17 ಲಕ್ಷ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ. ದೇಶಾದ್ಯಂತ ಆಫ್​ಲೈನ್/ಆನ್​ಲೈನ್ ವಿಧಾನಗಳಲ್ಲಿ ವಿವಿಧ ಪರೀಕ್ಷೆಗಳನ್ನು ಸಿಬಿಎಸ್​ಇ ನಡೆಸುತ್ತದೆ. ಆಯ್ದ ನಗರಗಳಲ್ಲಿ ಪರೀಕ್ಷೆ ಸಂದರ್ಭದಲ್ಲಿ ಮತ್ತು ಪರೀಕ್ಷೆಯ ನಂತರದಲ್ಲಿ ಡಿಜಿಟಲ್ ಫಿಂಗರ್​ಪ್ರಿಂಟ್ ಕ್ಯಾಪ್ಚರಿಂಗ್, ಫೋಟೋ ಕ್ಯಾಪ್ಚರಿಂಗ್, ಅಭ್ಯರ್ಥಿಗಳ ಸ್ಕಾ್ಯನ್ ಮಾಡಿದ ಫೋಟೋಗಳೊಂದಿಗೆ ಮುಖ ಹೊಂದಾಣಿಕೆ ಮೊದಲಾದ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಲಾಗುವುದು ಎಂದು ಸಿಬಿಎಸ್​ಇ ಹೇಳಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ವಿವಿಧ ಚಟುವಟಿಕೆಗಳನ್ನು ಮೇಲ್ವಿಚಾರಣೆ ಹಾಗೂ ನೈಜ ಸಮಯದ ಆಧಾರದಲ್ಲಿ ಪರಿಶೀಲಿಸುವ ಕಾರ್ಯ ನಡೆಯಲಿದೆ. ಈ ಮೂಲಕ ಪರೀಕ್ಷಾ ಪ್ರಕ್ರಿಯೆ ಸುಧಾರಿಸಲಾಗುವುದು. ಇದಕ್ಕಾಗಿ ಅಂದಾಜು 5 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಸಿಬಿಎಸ್​ಇ ಹೇಳಿದೆ.
ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

ವಿಶ್ವಕಪ್​ ಫಿನಾಲೆ: ರೋಹಿತ್​​ಗೆ ಕಾಡುತ್ತಿದೆ ಈ ಚಿಂತೆ, ಆದ್ರೂ ಆಸಿಸ್​ ಬಗ್ಗೆ ಸ್ಪಷ್ಟ ಅರಿವಿದೆ ಎಂದ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
