ಸೇನಾ ವೃತ್ತಿ:ರಾವತ್ ಅವರು ಭಾರತೀಯ ಸೇನೆಯ 27ನೇ ಸಿಒಎಎಸ್ ಆಗಿ ಜನರಲ್ ದಲ್ಬೀರ್ ಸಿಂಗ್ ಅವರಿಂದ 2016ರ ಡಿ.17ರಂದು ಅಧಿಕಾರ ಸ್ವೀಕರಿಸಿದ್ದರು. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್​ಡಿಎ) ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1978ರ ಡಿಸೆಂಬರ್​ನಲ್ಲಿ ಸೇನೆಗೆ ಸೇರ್ಪಡೆಯಾದರು. ಅವರ ತಂದೆ ಸೇವೆ ಸಲ್ಲಿಸಿದ್ದ 11ನೇ ಗೂರ್ಖಾ ರೈಫಲ್ಸ್​ನ 5ನೇ ಬೆಟಾಲಿಯನ್​ಗೆ ಸೇರಿದ್ದರು. ನಾಲ್ಕು ದಶಕದ ಸೇನಾ ವೃತ್ತಿಯಲ್ಲಿ, ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಸದರ್ನ್ ಕಮಾಂಡ್, ಮಿಲಿಟರಿ ಆಪರೇಶನ್ ಡೈರೆಕ್ಟೊರೇಟ್​ನಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಡೆಪ್ಯುಟಿ ಮಿಲಿಟರಿ ಸೆಕ್ರಟರಿ ಇತ್ಯಾದಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಗೂರ್ಖಾ ಬ್ರಿಗೇಡ್​ನಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ಸಿಒಎಎಸ್ ಆಗಿ ನಿಯೋಜಿತರಾಗಿದ್ದರು. ಈ ಹುದ್ದೆಯಿಂದ ವೈಸ್ ಚೀಫ್ ಆರ್ವಿು ಹುದ್ದೆಗೆ ನಿಯೋಜಿತರಾದ ನಾಲ್ಕನೇಯವರು.
ಶಾಂತಿಪಾಲನಾ ಪಡೆಯಲ್ಲಿ:ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಬಹುರಾಷ್ಟ್ರ ಬ್ರಿಗೇಡ್ ಅನ್ನು ಕಾಂಗೊದಲ್ಲಿ ಮುನ್ನಡೆಸಿದ ಅನುಭವಿ ಜನರಲ್ ರಾವತ್.
ಈಶಾನ್ಯ ಬಂಡಾಯ ಶಮನ:ಈಶಾನ್ಯ ರಾಜ್ಯಗಳಲ್ಲಿ ತೀವ್ರಗೊಂಡಿದ್ದ ಬಂಡಾಯವನ್ನು ಶಮನಗೊಳಿಸಿದ್ದು ಇವರ ಅವಧಿಯ ಸೇನಾ ಸಾಧನೆ. ದಿಮಾಪುರ ನೆಲೆಯ ಮೂರನೇ ತಂಡ ರಾವತ್ ಅವರ ನಿಗಾದಲ್ಲಿ 2015ರಲ್ಲಿ ಮ್ಯಾನ್ಮಾರ್​ನಲ್ಲಿ ಕ್ರಾಸ್-ಬಾರ್ಡರ್ ಆಪರೇಷನ್ ನಡೆಸಿ ಎನ್​ಎಸ್​ಸಿಎನ್-ಕೆ ಬಂಡುಕೋರರನ್ನು ನಿಯಂತ್ರಿಸುವಲ್ಲಿ ಯಶ ಸಾಧಿಸಿತ್ತು.
ಸರ್ಜಿಕಲ್ ಸ್ಟ್ರೈಕ್​ನಲ್ಲಿ…:2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿ ಅಲ್ಲಿ ಉಗ್ರ ನೆಲೆಯನ್ನು ನಾಶಗೊಳಿಸಿ ಹಿಂದಿರುಗಿದ ಯಶಸ್ವಿ ಸೇನಾ ಕಾರ್ಯಚರಣೆಯನ್ನು ಜನರಲ್ ರಾವತ್ ಅವರು ದೆಹಲಿಯ ಸೌತ್ ಬ್ಲಾಕ್​ನಲ್ಲಿ ಕುಳಿತು ಗಮನಿಸಿದ್ದರು.
ರಾವತ್ ಕುಟುಂಬ ಚಿತ್ರಣ:ಉತ್ತರಾಖಂಡದ ಪೌರಿಯ ಹಿಂದು ಗರ್​ವಾಲಿ ರಜಪೂತ ಕುಟುಂಬದಲ್ಲಿ ಲಕ್ಷ್ಮಣ ಸಿಂಗ್ ರಾವತ್ ಅವರ ಮಗನಾಗಿ 1958ರ ಮಾರ್ಚ್ 16ರಂದು ಜನನ. ಈ ಕುಟುಂಬ ನಾಲ್ಕು ತಲೆಮಾರುಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ರಾವತ್ ಡೆಹ್ರಾಡೂನ್, ಶಿಮ್ಲಾಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿದರು. ಮಧ್ಯಪ್ರದೇಶದ ಶಹದೋಲ್ ನಿವಾಸಿ ರಾಜಕಾರಣಿ ದಿವಂಗತ ಮೃಗೇಂದ್ರ ಸಿಂಗ್ ಅವರ ಪುತ್ರಿ ಮಧುಲಿಕಾ ಅವರನ್ನು ರಾವತ್ ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ.
ಮೊದಲ ಸಿಡಿಎಸ್:ದೇಶದ ಮೊಟ್ಟ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ಜನರಲ್ ಬಿಪಿನ್ ರಾವತ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸಿಡಿಎಸ್ ಎಂಬುದು ದೇಶದ ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಗಳ ಮುಖ್ಯಸ್ಥರ ಹೊಣೆಗಾರಿಕೆ. ಇದರಲ್ಲಿ ಅವರು ಸರ್ಕಾರಕ್ಕೆ ಸೇನಾ ಸಂಬಂಧಿ ವಿಚಾರದಲ್ಲಿ ಸಲಹೆಗಳನ್ನು ನೀಡಬೇಕಾಗಿತ್ತು. ಅಲ್ಲದೆ, ಮೂರೂ ಪಡೆಗಳ ಏಕೀಕರಣಕ್ಕಾಗಿ ಕೆಲಸಮಾಡಬೇಕಾಗಿತ್ತು. 2019ರ ಡಿಸೆಂಬರ್ 30ರಂದು ನೇಮಕಾತಿ ಆದೇಶ ಪ್ರಕಟವಾಗಿತ್ತು. ಡಿ.31ರಂದು ಸಿಡಿಎಸ್ ಆಗಿ ಅವರು ಪದಗ್ರಹಣ ಮಾಡಿದ್ದರು. ಈ ಹೊಣೆಗಾರಿಕೆಯನ್ನು ಜನರಲ್ ರಾವತ್ ನಿರ್ವಹಿಸಬೇಕು ಎಂಬ ಕಾರಣಕ್ಕೆ ಸೇನಾ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ಇದರಂತೆ ನಿವೃತ್ತಿ ವಯಸ್ಸನ್ನು 62ರಿಂದ 65 ವರ್ಷಕ್ಕೆ ಏರಿಸಲಾಗಿದೆ. ರಾವತ್ ಅವರು ಚೀಫ್ ಆಫ್ ಸ್ಟಾಫ್ ಕಮಿಟಿ (ಸಿಒಎಸ್​ಸಿ) ಹುದ್ದೆಯನ್ನು ಕಾಯಂ ಹೊಂದಿದ್ದರು. ಅವರ ವೃತ್ತಿ ಅನುಭವಕ್ಕೆ ನೀಡಲಾಗಿದ್ದ ಗೌರವ ಇದಾಗಿತ್ತು.
ಕಾರ್ಯಾಚರಣೆಗಳು:
ಸೇನಾ ಹೆಲಿಕಾಪ್ಟರ್​ ದುರಂತ: ಸಾವು-ಬದುಕಿನ ನಡುವೆ ಶೌರ್ಯಚಕ್ರ ಪುರಸ್ಕೃತ, ಕ್ಯಾಪ್ಟನ್​​ ವರುಣ್​​​ ಸಿಂಗ್​​​​ ಹೋರಾಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 9 =
Remember me
