ನವದೆಹಲಿ:ನಟ್ಟಿರುಳಲ್ಲಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ, ಕೇಕ್​ ಕತ್ತರಿಸಿ ಬರ್ತ್​ ಡೇ ಆಚರಿಸಿದ ಪ್ರಕರಣಗಳು ಆಗಾಗ ವರದಿ ಆಗುತ್ತಿರುತ್ತವೆ. ಅಂಥದ್ದೇ ಒಂದು ಪ್ರಕರಣ ಮರುಕಳಿಸಿದ್ದು, ಈ ಸಂದರ್ಭದಲ್ಲಿ ಗದ್ದಲ ಎಬ್ಬಿಸಿ ಸಂಭ್ರಮಾಚರಣೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರೇ ಫಜೀತಿಗೀಡಾದ ಪ್ರಸಂಗ ನಡೆದಿದೆ.
ದೆಹಲಿಯ ಸರಿತಾ ವಿಹಾರ್ ಬಳಿ ವ್ಯಕ್ತಿಯೊಬ್ಬ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ನಿಲ್ಲಿಸಿಕೊಂಡು, ಅದರ ಮೇಲೆ ಕೇಕ್ ಇರಿಸಿ, ಹುಡುಗರನ್ನು ಸೇರಿಸಿಕೊಂಡು ಗಲಾಟೆ ಎಬ್ಬಿಸಿ ಬರ್ತ್​ಡೇ ಆಚರಿಸುತ್ತಿದ್ದುದನ್ನು ಗಸ್ತಿನಲ್ಲಿದ್ದ ಪೊಲೀಸರು ಪ್ರಶ್ನಿಸಿದ್ದರು. ಆಗ ಅವರೆಲ್ಲ ಪೊಲೀಸರ ಬಳಿಗೆ ಜಗಳ ತೆಗೆದಿದ್ದರು.
ಅದಕ್ಕೆ ತುರ್ತು ಸ್ಪಂದನಾ ವಾಹನ (ಇಆರ್​ವಿ) ಕರೆಸಿಕೊಂಡಾಗ ಅಲ್ಲಿ ಜಮಾಯಿಸಿದ್ದ ಜನರು ಚೆಲ್ಲಾಪಿಲ್ಲಿ ಆಗಿ ಓಡಿದ್ದಾರೆ. ಆದರೆ ಆಗ ಬರ್ತ್​ಡೇ ಆಚರಿಸಿಕೊಳ್ಳಬೇಕಿದ್ದ ವ್ಯಕ್ತಿ ತಪ್ಪಿಸಿಕೊಳ್ಳುವ ಭರದಲ್ಲಿ ಬಿಎಂಡಬ್ಲ್ಯು ಕಾರನ್ನು ಗಸ್ತಿನಲ್ಲಿದ್ದ ಪೊಲೀಸರ ಮೇಲೇ ಹತ್ತಿಸಲು ಯತ್ನಿಸಿದ್ದ. ಆ ಪೈಕಿ ಕಾನ್​ಸ್ಟೆಬಲ್​ ಅಂಕುರ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡರೆ, ಕಾನ್​ಸ್ಟೆಬಲ್ ಜಿತೇಂದ್ರ ಗಾಯಗೊಂಡಿದ್ದಾರೆ.
ನಂತರ ಇಆರ್​​ವಿ ವಾಹನ ಕಾರನ್ನು ಚೇಸ್​ ಮಾಡಿದ್ದು, ಸ್ವಲ್ಪ ದೂರದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಗಾಯಗೊಳಿಸಿದ ವ್ಯಕ್ತಿ ನಂತರ ಕಾರು ನಿಲ್ಲಿಸಿ ಓಡಿ ತಪ್ಪಿಸಿಕೊಂಡಿದ್ದಾನೆ. ಫರಿದಾಬಾದ್ ನಿವಾಸಿ ಅಮಿತ್ ಭದನ ಎಂಬವರ ಹೆಸರಲ್ಲಿ ಕಾರು ನೋಂದಣಿ ಆಗಿದೆ. ಸ್ಥಳದಲ್ಲಿ ಮೊಬೈಲ್​ ಫೋನ್​ ಕೂಡ ಸಿಕ್ಕಿದ್ದು ಅದು ಕುಲ್​ದೀಪ್​ ಬಿದೂರಿ ಎಂಬಾತನಿಗೆ ಸೇರಿದ್ದೆಂದು ತಿಳಿದುಬಂದಿದೆ. ಇಬ್ಬರೂ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
