ಚಂಢೀಗಡ:ಹುಟ್ಟುಹಬ್ಬಕ್ಕೆ ತರಿಸಿದ್ದ ಕೇಕ್​ ಸೇವಿಸಿ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಪಂಜಾಬ್​ನ ಪಟಿಯಾಲದಲ್ಲಿ ನಡೆದಿದೆ.
ಇದನ್ನೂ ಓದಿ:ಅಕಾಲಿಕ ಮಳೆಗೆ ತತ್ತರಿಸಿದ ಅನ್ನದಾತ: ನೆಲ ಕಚ್ಚಿದ ಬೆಳೆ, ಅಪಾರ ನಷ್ಟ!
ಮಾರ್ಚ್ 24 ರಂದು ತಮ್ಮ ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪೋಷಕರು ಪಂಜಾಬ್​ನ ಪಟಿಯಾಲದಲ್ಲಿರುವ ಬೇಕರಿಯೊಂದರಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಹುಟ್ಟುಹಬ್ಬದ ಕೇಕ್ ತಿಂದ ಸೇವಿಸಿದ ಕುಟುಂಬಸ್ಥರಿಗೆ ಹಾಗೂ ಬಾಲಕಿಕೆ ವಾಕರಿಕೆ ಹಾಗೂ ವಾಂತಿಯಾಗಿದೆ ಇದನ್ನು ಅರಿತ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ 10 ವರ್ಷದ ಬಾಲಕಿ ಮಾನ್ವಿ ಆಸ್ಪತ್ರೆಗೆ ತಲುಪಿದ ನಂತರ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಫುಡ್​ ಪಾಯ್ಸನ್​ ನಿಂದಾಗಿ ಈ ದಾರುಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್​ 273,304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.
ಬೇಕರಿಯ ಹೆಸರು ಮತ್ತು ಬೇಕರಿ ಇರುವ ವಿವರಗಳು ಇನ್ನೂ ತಿಳಿದುಬಂದಿಲ್ಲ. ತಮ್ಮ ಮಗಳ ಸಾವಿಗೆ ಕೇಕ್ ಕಾರಣ ಎಂದು ಹೇಳಿರುವ ಕುಟುಂಬವು ಬೇಕರಿ ಮತ್ತು ಅದು ಮಾರಾಟ ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಟಾಲಿವುಡ್​ ನಟ ನಿಖಿಲ್​: ಯಾವ ಪಕ್ಷ, ಕ್ಷೇತ್ರ ಇಲ್ಲಿದೆ ಮಾಹಿತಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
