ಹೈದರಾಬಾದ್:ಒಂದು ರೂಪಾಯಿಗೆ ಬಿರಿಯಾನಿ ತಿನ್ನಲು ಹೋಟೆಲ್​ವೊಂದಕ್ಕೆ ಬಂದು ಪೊಲೀಸರಿಗೆ 100 ರಿಂದ 235 ರೂ.ದಂಡ ಕಟ್ಟಿರುವ ವಿಚಿತ್ರ ಘಟನೆ ಹೈದರಾಬಾದ್​ನ ಕರೀಂನಗರದಲ್ಲಿ ನಡೆದಿದೆ.ಇಲ್ಲಿನ ಗೀತಾ ಭವನದ ಎದುರು ಹೊಸ​ ಹೋಟೆಲ್​ವೊಂದು ಆರಂಭಿಕ ಕೊಡುಗೆಯಾಗಿ 1 ರೂಪಾಯಿಗೆ 1 ಬಿರಿಯಾನಿ ಕೊಡುವುದಾಗಿ ಘೋಷಿಸಿತ್ತು. ಆದರೆ ಆ ಒಂದು ರೂಪಾಯಿ ಚಲಾವಣೆಯಲ್ಲಿರುವ ನಾಣ್ಯವಾಗಿರದೇ, ಹಳೆಯ ಒಂದು ರೂ. ನೋಟು ಆಗಿರಬೇಕು ಹಾಗೂ ಮಧ್ಯಾಹ್ನ 2.30ರ ನಂತರ ಆಫರ್ ಆರಂಭವಾಗಲಿದ್ದು, ತಲಾ ಒಂದು ಬಿರಿಯಾನಿ ಮಾತ್ರ ನೀಡುವುದಾಗಿ ಆಡಳಿತ ಮಂಡಳಿ ಷರತ್ತು ಹಾಕಿತ್ತು.ಇದನ್ನೂ ಓದಿ:ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ ಹೆಡ್​ ಕಾನ್ಸ್​ಟೆಬಲ್ ಹತ್ಯೆ​ ಆರೋಪಿ; ಪೊಲೀಸರಿಂದ ಗುಂಡೇಟು, ಬಂಧನ
ಕೂಡಲೇ ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಿಸಿಲಿನ ತಾಪವನ್ನು ಲೆಕ್ಕಿಸದೆ ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಅಪಾರ ಜನಸ್ತೋಮ ನೆರೆದಿತ್ತು. ಮೊದಮೊದಲು ಆಹಾರ ಪ್ರಿಯರು ಹೋಟೆಲ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತು ತಮ್ಮ ಪಾರ್ಸೆಲ್‌ಗಳನ್ನು ಒಂದೊಂದಾಗಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೆಲವರು ಅಲ್ಲಿಯೇ ಕುಳಿತು ತಿಂದಿದ್ದಾರೆ.ಒಂದೆರಡು ಘಂಟೆಗಳಲ್ಲೇ ಹೋಟೆಲ್​ ಸುಮಾರು 250 ರಿಂದ 300 ಬಿರಿಯಾನಿಗಳನ್ನು ಮಾರಾಟ ಮಾಡಿದೆ. ಆದರೆ ಹೊರಗಿದ್ದ ಜನರು ಸುಡು ಬಿಸಿಲಿನಿಂದ ಬೇಸತ್ತು ಪಾರ್ಸೆಲ್‌ ನೀಡುವಂತೆ ಕೂಗಲು ಪ್ರಾರಂಭಿಸಿ, ಹೋಟೆಲ್​ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣವನ್ನು ಕಳೆದುಕೊಂಡು ನೂಕುನುಗ್ಗಲು ಶುರುವಾಗಿದೆ.ಇದನ್ನೂ ಓದಿ:VIDEO| ನಮ್ಮ ಹೋರಾಟ ಏನಿದ್ದರೂ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ: ಕುಸ್ತಿಪಟುಗಳುಅಲ್ಲದೇ, ಹೋಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ನಿಗದಿತ ಸ್ಥಳದಲ್ಲಿ ಪಾರ್ಕಿಂಗ್​ ಮಾಡದಿರುವ ಬೈಕ್​ ಮಾಲೀಕರಿಗೆ 100 ರಿಂದ 235 ರೂ.ವರೆಗೆ ದಂಡ ಹಾಕಿದ್ದಾರೆ. ಜತೆಗೆ ಪೊಲೀಸರು ಹೋಟೆಲ್​ ಮಾಲೀಕರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
