ಮುಂಬೈ:ಜೊಮ್ಯಾಟೊ ಹಾಗೂ ಸ್ವಿಗ್ಗಿ ಈ ಎರಡೂ ಪ್ರತಿಸ್ಪರ್ಧಿ ಕಂಪನಿಗಳು. ಮನೆ, ಕಚೇರಿ ಸೇರಿದಂತೆ ಯಾವುದೇ ಸ್ಥಳಕ್ಕಾದರೂ ಆಹಾರವನ್ನು ಪೂರೈಸುವ ಕಂಪನಿ. ಸ್ವಿಗ್ಗಿ ಮೂಲಕ 2023ರಲ್ಲಿ ಅತಿಹೆಚ್ಚು ಆರ್ಡರ್​ ಮಾಡಲಾದ ಭಕ್ಷ್ಯವಾಗಿ ಬಿರಿಯಾನಿ ಪ್ರಥಮ ಸ್ಥಾನ ಗಳಿಸಿತ್ತು. ಈಗ ಜೊಮ್ಯಾಟೊದಲ್ಲಿ ಇದೇ ಭಕ್ಷ್ಯಕ್ಕೆ ಅಗ್ರಸ್ಥಾನ ದೊರೆತಿದೆ.
ಆಹಾರ ವಿತರಣೆ ದೈತ್ಯ ಕಂಪನಿ ಜೊಮ್ಯಾಟೊ 2023 ರಲ್ಲಿ ತನ್ನ ಆಹಾರ-ಆರ್ಡರ್ ಮಾಡುವ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ, ಬಿರಿಯಾನಿಯು ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿದೆ. 10.09 ಕೋಟಿಗೂ ಹೆಚ್ಚು ಬಿರಿಯಾನಿ ಆರ್ಡರ್‌ಗಳನ್ನು ಜೊಮ್ಯಾಟೊದಲ್ಲಿ ಮಾಡಲಾಗಿದೆ. ನಂತರ ಸ್ಥಾನದಲ್ಲಿ 7.45 ಕೋಟಿ ಆರ್ಡರ್‌ಗಳೊಂದಿಗೆ ಪಿಜ್ಜಾ.ಇದೆ. 3,580 ಆರ್ಡರ್‌ಗಳನ್ನು ನೀಡಿದ ಮುಂಬೈನ ಹನೀಸ್ ಎಂಬುವರು ‘ರಾಷ್ಟ್ರದ ಅತಿದೊಡ್ಡ ಆಹಾರಪ್ರೇಮಿ’ ಎಂದು ಜೊಮ್ಯಾಟೊ ಹೇಳಿದೆ. ಇವರು ದಿನಕ್ಕೆ ಸರಾಸರಿ ಒಂಬತ್ತಕ್ಕಿಂತ ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದಾರೆ.
ಮುಂಬೈನಲ್ಲಿ ಮತ್ತೊಬ್ಬ ವ್ಯಕ್ತಿ ಒಂದೇ ದಿನದಲ್ಲಿ 121 ಆರ್ಡರ್‌ ಮಾಡಿದ ದಾಖಲೆ ಮಾಡಿದ್ದಾರೆ.
ನಗರಗಳಿಗೆ ಪೈಕಿ, ಬೆಳಗಿನ ಉಪಾಹಾರದ ಆರ್ಡರ್‌ಗಳಲ್ಲಿ ಬೆಂಗಳೂರು ಮುಂದಿದೆ. ತಡರಾತ್ರಿಯ ಆರ್ಡರ್‌ಗಳಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. 46,273 ರೂಪಾಯಿ ಮೊತ್ತದ ಅತಿದೊಡ್ಡ ಸಿಂಗಲ್ ಆರ್ಡರ್ ಬೆಂಗಳೂರಿನಿಂದ ಬಂದಿದೆ. ಇದಲ್ಲದೆ, ಇದೇ ನಗರದ ಗ್ರಾಹಕರು 6.6 ಲಕ್ಷ ರೂಪಾಯಿ ಮೌಲ್ಯದ 1,389 ಗಿಫ್ಟ್ ಆರ್ಡರ್‌ಗಳನ್ನು Zomato ಮೂಲಕ ಕಳುಹಿಸಿದ್ದಾರೆ.ಈ ವರ್ಷದಲ್ಲಿ ನೀಡಲಾದ ಬಿರಿಯಾನಿ ಆರ್ಡರ್‌ಗಳನ್ನು ಒಟ್ಟಾಗಿ ಸೇರಿಸಿದರೆ ದೆಹಲಿಯ ಎಂಟು ಕುತುಬ್ ಮಿನಾರ್‌ಗಳನ್ನು ತುಂಬಬಹುದು. ಅಲ್ಲದೆ, ಪಿಜ್ಜಾಗಳು ಕೋಲ್ಕತ್ತಾದ ಈಡನ್ ಗಾರ್ಡನ್ ರೀತಿಯ ಐದು ಕ್ರಿಕೆಟ್ ಸ್ಟೇಡಿಯಂಗಳನ್ನು ಆವರಿಸಬಹುದು ಎಂದು ಜೊಮ್ಯಾಟೊ ಹಾಸ್ಯಮಯವಾಗಿ ವಿವರಿಸಿದೆ. ನೂಡಲ್ ಬೌಲ್‌ಗಳು 4.55 ಕೋಟಿ ಆರ್ಡರ್‌ಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.
ಜೊಮಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿಯಲ್ಲಿಯೂ ಬಿರಿಯಾನಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯವಾಗಿದೆ. 2023 ರಲ್ಲಿ ಸ್ವಿಗ್ಗಿ ಗ್ರಾಹಕರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಪ್ರತಿ 5.5 ಚಿಕನ್ ಬಿರಿಯಾನಿಗಳಿಗೆ, ಒಂದು ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ವರದಿ ತಿಳಿಸಿತ್ತು.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − ten =
Remember me
