ನವದೆಹಲಿ:ಕ್ರೈಸ್ತ ಸನ್ಯಾಸಿನಿಯರ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೋ ಮುಲಕ್ಕಲ್ ಅವರು ಜಲುಂದೂರ್ ಬಿಷಪ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಭಾರತದಲ್ಲಿನ ವ್ಯಾಟಿಕನ್ ಪ್ರತಿನಿಧಿ ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ:ಕ್ರೈಸ್ತ ಧರ್ಮಕ್ಕೆ ಸೇರಿ, ಪರಲೋಕ ಪ್ರಾಪ್ತಿ ಆಗುತ್ತೆ,; ತುಮಕೂರಿನಲ್ಲಿ ಬೆಳಕಿಗೆ ಬಂತು ಮತಾಂತರ ಪ್ರಯತ್ನ!
ಅತ್ಯಾಚಾರ ಪ್ರಕರಣದಲ್ಲಿ ಕಳೆದ ವರ್ಷ ಕೇರಳದ ಸ್ಥಳೀಯ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದು ಒಂದುವರೆ ವರ್ಷದ ನಂತರ ಅರು ರಾಜೀನಾಮೆ ನೀಡಿದ್ದಾರೆ. ಇದು ಹೊಸ ಬಿಷಪ್​ನ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ. ಎಂದು ದೇಶದಲ್ಲಿ ವ್ಯಾಟಿಕನ್​ನ ಮಿಷನ್ ಎಂದು ಹೇಳಿಕೆ ನೀಡಿದೆ.
“ಇಂದು, 1 ಜೂನ್ 2023, ಪೋಪ್ ಫ್ರಾನ್ಸಿಸ್ ಅವರು ಜುಲುಂದೂರ್​​ನ ಬಿಷಪ್ ಆಗಿ ಆರ್ಟಿ ರೆವ್ ಫ್ರಾಂಕೋ ಮುಲಕ್ಕಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ” ಎಂದು ಭಾರತದಲ್ಲಿನ ಅಪೋಸ್ಟೋಲಿಕ್ ನನ್ಸಿಯೇಚರ್ (ಹೋಲಿ ಸೀನ ಉನ್ನತ ಮಟ್ಟದ ರಾಜತಾಂತ್ರಿಕ ಮಿಷನ್) ಹೇಳಿಕೆಯಲ್ಲಿ ತಿಳಿಸಿದೆ.
“ಈ ನಿಟ್ಟಿನಲ್ಲಿ, ಬಿಷಪ್ ಮುಲಕ್ಕಲ್ ಕುರಿತಾದ ಆರೋಪಗಳಿಂದ ಖುಲಾಸೆಗೊಳಿಸಿದ ಕೇರಳದ ಕೊಟ್ಟಾಯಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೋಲಿ ಸೀ ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಲು ಅಪೋಸ್ಟೋಲಿಕ್ ನನ್ಸಿಯೇಚರ್ ಬಯಸುತ್ತದೆ. ಇದನ್ನು ಕೇರಳ ಹೈಕೋರ್ಟ್ ಒಪ್ಪಿಕೊಂಡಿದೆ,” ಎಂದು ಹೋಲಿ ಸೀ ನ ಉನ್ನತ ಮಟ್ಟದ ರಾಜತಾಂತ್ರಿಕ ಮಿಷನ್ ಹೇಳಿದೆ.
“ಜಲಂಧರ್ ಡಯಾಸಿಸ್‌ನಲ್ಲಿ ಈ ವಿಷಯದ ಬಗ್ಗೆ ಇನ್ನೂ ವಿಭಜಿತ ಪರಿಸ್ಥಿತಿಯನ್ನು ಗಮನಿಸಿದರೆ, ರಾಜೀನಾಮೆಯನ್ನು ಮುಲಕ್ಕಲ್ ಅವರ ಮೇಲೆ ವಿಧಿಸಿದ ಶಿಸ್ತಿನ ಕ್ರಮವಲ್ಲ. ಆದರೆ ಪ್ರೊ ಬೋನೊ ಎಸೆಸೆಲ್ಸಿಯಾ, ವಿಶೇಷವಾಗಿ ಜಲುಂದೂರ್​ನ ಡಯಾಸಿಸ್​ನ ಒಳಿತಿಗಾಗಿ ಹೊಸ ಬಿಷಪ್ ಅಗತ್ಯವಿದೆ” ಎಂದು ಹೇಳಿದೆ.
ಇದನ್ನೂ ಓದಿ:ಶಿವಮೊಗ್ಗದ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಸ್ಟ್; ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಮುಂಬೈಗೆ ಹೊರಟಿದ್ದಳಾ ಆ ಹುಡುಗಿ?
ಈ ಪ್ರಕರಣವು ಕೇರಳದ ಕೊಟ್ಟಾಯಂ ಜಿಲ್ಲೆಯ ಸನ್ಯಾಸಿನಿಯರಿಗೆ ಸಂಬಂಧಿಸಿದೆ, ಅವರು ಜೂನ್ 2018 ರಲ್ಲಿ ಬಿಷಪ್ ತನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
2014-2016ರ ಅವಧಿಯಲ್ಲಿ ಕೊಟ್ಟಾಯಂನಲ್ಲಿರುವ ಸಭೆಯ ಮನೆಯಲ್ಲಿ ಈ ಘಟನೆಗಳು ನಡೆದಿವೆ ಎಂದು ಜಲಂಧರ್ ಡಯಾಸಿಸ್ ಅಧೀನದಲ್ಲಿರುವ ಧರ್ಮಪ್ರಾಂತ್ಯದ ಸಭೆಯಾದ ಮಿಷನರೀಸ್ ಆಫ್ ಜೀಸಸ್‌ನ ಸದಸ್ಯರಾಗಿರುವ ಸನ್ಯಾಸಿನಿ ಹೇಳಿದ್ದಾರೆ.
ನಂತರ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ಸನ್ಯಾಸಿನಿಯ ಸಹೋದ್ಯೋಗಿಗಳು, ನಾಗರಿಕ ಸಮಾಜದ ಸದಸ್ಯರ ಬೆಂಬಲದೊಂದಿಗೆ, ಬಿಷಪ್‌ನ ಬಂಧನಕ್ಕೆ ಒತ್ತಾಯಿಸಿ ಕೊಚ್ಚಿಯಲ್ಲಿ ಆಂದೋಲನವನ್ನು ಪ್ರಾರಂಭಿಸಿದರು. ಮುಲಕ್ಕಲ್ ಅವರನ್ನು ಸೆಪ್ಟೆಂಬರ್ 21 ರಂದು ಬಂಧಿಸಿ ಅಕ್ಟೋಬರ್ 17 ರವರೆಗೆ ಜೈಲಿನಲ್ಲಿರಿಸಲಾಯಿತು. ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಹೆಸರಿಗೆ ಪಾತ್ರರಾದರು. ವ್ಯಾಟಿಕನ್ ಅವರನ್ನು ಜಲಂಧರ್‌ನ ಬಿಷಪ್‌ನ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:ಯುವತಿಯೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ಕ್ರೈಸ್ತ ಧರ್ಮಗುರು ಬೆಂಗಳೂರಿನಲ್ಲಿ ಅರೆಸ್ಟ್​!
ಕಳೆದ ವರ್ಷ ಜನವರಿಯಲ್ಲಿ ಕೊಟ್ಟಾಯಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
