ನವದೆಹಲಿ:ಲಾಕ್​ಡೌನ್​ನಿಂದಾಗಿ ಜೀವನಶೈಲಿಯೇ ಬದಲಾಗುತ್ತಿದೆ. ಮಾಸ್ಕ್​, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಂತಹ ಹೊಸ ಸಾಮಾಜಿಕ ನಿಯಮಾವಳಿಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇದೆ.ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಫೇಸ್ ಮಾಸ್ಕ್ ಅವಶ್ಯಕವಾಗಿದೆ. ಮನೆಯಿಂದ ಹೊರಗೆ ಹೊಗುವ ಪ್ರತಿಯೊಬ್ಬರೂ ತಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿಡಲು ಮಾಸ್ಕ್ ಧರಿಸುತ್ತಾರೆ.ಆದಾಗ್ಯೂ, ಜನರು ಮಾಸ್ಕ್​ ಎಂಬುದರ ಪರಿಕಲ್ಪನೆಯನ್ನೇ ವಿಲಕ್ಷಣವಾಗಿ ಬಿತ್ತರಿಸುತ್ತಿದ್ದಾರೆ. ಮಾಸ್ಕ್​​ನ್ನು ಬೇರೆ ವಸ್ತುಗಳೊಂದಿಗೆ ಅಥವಾ ತಮ್ಮಿಷ್ಟ ಬಂದ ವಸ್ತುವಿನಂತೆ ಬದಲಾಯಿಸಿಕೊಂಡ ಉದಾಹರಣೆಗಳಿವೆ. ಇವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಇ-ಪಾಸ್‍ಗೋಸ್ಕರ ಥಾಣೆ ಜಿಲ್ಲಾಧಿಕಾರಿ ವೆಬ್‍ಸೈಟ್ ಹ್ಯಾಕ್ ಮಾಡಿತೊಂದು ಗ್ಯಾಂಗ್‍!
ಕೋವಿಡ್ ಐದು ತಿಂಗಳ ಹಿಂದೆ ತ್ವರಿತ ದರದಲ್ಲಿ ಹರಡುತ್ತಿದ್ದಂತೆ ಮಾಸ್ಕ್​​​ ಕೊರತೆಯುಂಟಾಗಿತ್ತು. ಪರಿಣಾಮವಾಗಿ, ಅಂಗಡಿಗಳಲ್ಲೂ ಇವು ಲಭ್ಯವಿಲ್ಲದಂತಾದಾಗ ಜಗತ್ತಿನಾದ್ಯಂತ ಅನೇಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸುತ್ತಿದ್ದಾರೆ.ಆದರೆ ಅತ್ಯಂತ ವಿಲಕ್ಷಣವಾದ ಸಂಗತಿ ಬಿಂಬಿಸುವಂತಹ ಮಾಸ್ಕ್​​ಗಳನ್ನು ತಯಾರಿಸುವ/ ಧರಿಸುವ ಮೂಲಕ ನಿಯಮಗಳನ್ನು ಮೀರುವ ವ್ಯಕ್ತಿಗಳೂ ಇದ್ದಾರೆ.ತೀರ ಇತ್ತೀಚೆಗಷ್ಟೇ ಮಾಸ್ಕ್ ಧರಿಸದ ಕಾರಣ ಪೋಸ್ಟ್ ಆಫೀಸ್‌ನಲ್ಲಿ ಸೇವೆ ನಿರಾಕರಿಸಿದ ನಂತರ ಮಹಿಳೆಯೊಬ್ಬರು ಮುಖ ಮುಚ್ಚಿಕೊಳ್ಳಲು ಒಳ ಉಡುಪನ್ನು ಬಳಸಿದರು. ಅದಕ್ಕೂ ಮೊದಲು, ಮಹಿಳೆಯೊಬ್ಬಳು ಶಾಪಿಂಗ್ ನಲ್ಲಿದ್ದಾಗ ರಕ್ಷಣೆಗಾಗಿ ಬುಜ್ ಲೈಟ್​​​ಯಿರ್ ಹೆಲ್ಮೆಟ್ ಧರಿಸಿದ್ದಳು.ತೀರಾ ಇತ್ತೀಚೆಗೆ, ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಮಹಿಳೆಯೊಬ್ಬಳು ಮೂಗು ಮತ್ತು ಬಾಯಿಯನ್ನು ರಟ್ಟಿನಿಂದ ಮಾಡಿದ ಕೆಎಫ್‌ಸಿ ಬಾಕ್ಸ್​​​ನಿಂದ ಮುಚ್ಚಿಕೊಂಡಿದ್ದಾಳೆ. ಓಕ್ಲ್ಯಾಂಡ್ಸ್ ಪಾರ್ಕ್​​​ನ ಶಾಪಿಂಗ್ ಮಾಲ್ ನಲ್ಲಿ ವಿಲಕ್ಷಣ ದೃಶ್ಯ ಕಂಡುಬಂದಿದೆ.ಈ ಸಣ್ಣ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ:
ಇದನ್ನೂ ಓದಿ:ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?
ಕೆಳಗೆ ತೆರೆದುಕೊಂಡಿರುವ ಕೆಎಫ್‌ಸಿ ಬಾಕ್ಸ್ ಮಹಿಳೆಗೆ ತನ್ನ ತಲೆಯನ್ನು ಸೇರಿಸಲು ಅನುಕೂಲವಾಗಿದೆ. ಇನ್ನೂ ಆಶ್ಚರ್ಯವೆಂದರೆ, ಇದು ಅವಳಿಗೆ ಯಾವುದೇ ಕಿರಿಕಿರಿ ಎನಿಸದೆ ಸರಿ ಹೊಂದಿದೆಯಂತೆ. ದೃಶ್ಯ ವೈರಲ್ ಆಗುತ್ತಿದ್ದಂತೆ, ಭಾರೀ ಕಮೆಂಟ್​​ಗಳು ಶುರುವಾಗಿವೆ. ಫೇಸ್ ಮಾಸ್ಕ್‌ ಗೆ ಬದಲಾಗಿ ಕಾಣಿಸಿಕೊಳ್ಳುತ್ತಿರುವ ವಸ್ತುಗಳು ತೀರಾ ಚರ್ಚೆಗೆ ಗ್ರಾಸವಾಗುತ್ತಿವೆ.ಪ್ರಯಾಣಿಕನೊಬ್ಬ ತಲೆಯ ಮೇಲೆ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಾಕಿಕೊಂಡಿರುವುದು ಸಹ ಪ್ರಯಾಣಿಕರ ಗಮನ ಸೆಳೆದಿತ್ತು.
ಸೇನಾ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 10 =
Remember me
