ಪಂಜಾಬ್​:ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ತನ್ನ ಕೂಟವನ್ನು ವಿಸ್ತರಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸುತ್ತಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಅಕಾಲಿದಳ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದೀಗ ಮೂಲಗಳನ್ನು ಉಲ್ಲೇಖಿಸಿ ದೊಡ್ಡ ಸುದ್ದಿ ಹೊರಬೀಳುತ್ತಿದ್ದು, ಅದರ ಪ್ರಕಾರ ಪಂಜಾಬ್‌ನಲ್ಲಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ ಖಚಿತ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಸೇಲಂ: ಹತ್ಯೆಯಾದ ಕಾರ್ಯಕರ್ತನನ್ನು ನೆನೆದು ಪ್ರಧಾನಿ ಮೋದಿ ಭಾವುಕ
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸುವುದಿಲ್ಲ ಎಂದು ಘೋಷಿಸಿದ ನಂತರ ಬಿಜೆಪಿ ತನ್ನ ತಂತ್ರವನ್ನು ಬದಲಾಯಿಸಿದೆ. ರಾಜಕೀಯ ಬೆಳವಣಿಗೆಗಳನ್ನು ದೃಢೀಕರಿಸಿದ ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ಎಸ್‌ಎಸ್ ಚನ್ನಿ ಪಂಜಾಬ್‌ನಲ್ಲಿ ಎರಡು ಪಕ್ಷಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿರುವುದು ಈಗ ಚರ್ಚೆಗೆ ಪುಷ್ಠಿ ನೀಡಿದೆ.
ಅಕಾಲಿದಳ ಮತ್ತು ಬಿಜೆಪಿ ಮೈತ್ರಿ ಕುರಿತು ಚರ್ಚಿಸಲಾಗುತ್ತಿದೆ. ಈ ವಿಷಯವ್ನನು ಖಚಿತಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಾರ್ಚ್ 22 ರಂದು ಅಕಾಲಿದಳದ ಕೋರ್ ಕಮಿಟಿ ಸಭೆ ನಡೆಯಲಿದೆ. ಅವರು ನಿರ್ಧರಿಸಿದ ನಂತರ, ಬಿಜೆಪಿ ಮತ್ತು ಎಸ್‌ಎಡಿ ನಡುವೆ ಔಪಚಾರಿಕ ಸಭೆ ನಡೆಯಲಿದೆ. ಮೈತ್ರಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಚನ್ನಿ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಕೋರ್ ಕಮಿಟಿ ಸಭೆ ಚಂಡೀಗಢದಲ್ಲಿ ನಡೆಯಲಿದೆ. ಅಕಾಲಿದಳದ ಹಿರಿಯ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ದಲ್ಜಿತ್ ಸಿಂಗ್ ಚೀಮಾ ಅವರು ಚುನಾವಣಾ ಮೈತ್ರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.
ಕೋರ್ ಕಮಿಟಿ ಸಭೆ ಬಂದಾಗಲೆಲ್ಲಾ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಗುತ್ತದೆ. ಲೋಕಸಭೆ ಚುನಾವಣೆ, ಸದ್ಯದ ಪಂಜಾಬ್‌ನ ಸ್ಥಿತಿಗತಿ, ಜೊತೆಗೆ ರಾಜಕೀಯ ತಂತ್ರದ ಜೊತೆಗೆ ಚರ್ಚೆಗೆ ಬರಲಿದೆ ಎಂದು ಅಕಾಲಿದಳದ ಹಿರಿಯ ನಾಯಕ ಡಾ.ದಲ್ಜಿತ್ ಸಿಂಗ್ ಚೀಮಾ ಅವರು ಬಿಜೆಪಿ ಮೈತ್ರಿ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಂಜಾಬ್‌ನಲ್ಲಿ ಮೈತ್ರಿಗೆ ಬಿಜೆಪಿ ಮತ್ತು ಅಕಾಲಿದಳ ನಡುವೆ ಕೆಲಕಾಲ ಮಾತುಕತೆ ನಡೆದಿತ್ತು. ನಂತರ ಪಂಜಾಬ್‌ನಲ್ಲಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟದ ನಡುವಿನ ಮಾತುಕತೆ ವಿಫಲವಾಗಿತ್ತು. ಕೇಂದ್ರ ಸರ್ಕಾರವು ರೈತರಿಗಾಗಿ ಹೊಸ ಕೃಷಿ ಕಾನೂನುಗಳನ್ನು ತಂದಾಗ, ಅಕಾಲಿದಳವು ಅದನ್ನು ವಿರೋಧಿಸಿ ಎನ್‌ಡಿಎ ಜೊತೆಗಿನ ತನ್ನ ಮೈತ್ರಿಯನ್ನು ಮುರಿದುಕೊಂಡಿತ್ತು. ಅದರ ನಂತರ, ಅಕಾಲಿದಳವು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತು.
ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ.
ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
