ನವದೆಹಲಿ:ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಹಸ್ತಲಾಘವ ಮಾಡಿದ ನಂತರ ತನ್ನ ಪ್ಯಾಂಟ್​ಗೆ ಕೈಗಳನ್ನು “ಒರೆಸಿಕೊಂಡರು” ಎಂದು ಆರೋಪಿಸಲಾಗಿದೆ.
ರಾಹುಲ್ ಗಾಂಧಿ ಶನಿವಾರ ದೆಹಲಿಯ ಲುಟಿಯನ್ಸ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದರು.
ಇದನ್ನೂ ಓದಿ:ರೋಡ್​ ಶೋ ನಡೆಸಿ ರೆಸಾರ್ಟ್​ಗೆ ತೆರಳಿದ ರಾಹುಲ್​ ಗಾಂಧಿ! ಜತೆಗೆ ಯಾರೆಲ್ಲಾ ಇದ್ರು?
ಟ್ವಿಟ್ಟರ್‌ನಲ್ಲಿ ಗಾಂಧಿಯವರ ವೀಡಿಯೊವನ್ನು ಹಂಚಿಕೊಂಡಿರುವ ಅಮಿತ್ ಮಾಳವಿಯಾ, “ರಾಹುಲ್ ಗಾಂಧಿ ತಮ್ಮ ಮನೆಯ ಸಿಬ್ಬಂದಿಯೊಂದಿಗೆ ಹಸ್ತಲಾಘವ ಮಾಡಿದ ನಂತರ ತಮ್ಮ ಕೈಯನ್ನು ಒರೆಸುತ್ತಾರೆ. ಈ ವ್ಯಕ್ತಿ, ಅದಷ್ಟು ವರ್ಷಗಳ ಕಾಲ ಆತನಿಗೆ ಸೇವೆ ಸಲ್ಲಿಸಿರಬೇಕು. ಆದರೂ ಇಂತಹ ತಿರಸ್ಕಾರ…” ಎಂದು ಬರೆದುಕೊಂಡಿದ್ದಾರೆ.
Rahul Gandhi wipes his hand (on pants) after shaking hands with his house staff. These men/women must have served him over the years. Such disdain…pic.twitter.com/tEPPkeCP1Y— Amit Malviya (@amitmalviya)April 22, 2023
Rahul Gandhi wipes his hand (on pants) after shaking hands with his house staff. These men/women must have served him over the years. Such disdain…pic.twitter.com/tEPPkeCP1Y
“ಟ್ರಿಮ್” ಮಾಡಿದ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಶೀಘ್ರವಾಗಿ ತಿರುಗೇಟು ನೀಡಿದ್ದು “ನಿಮ್ಮ ಜೀವನ ವ್ಯರ್ಥವಲ್ಲವೇ? ಬೆಳಿಗ್ಗೆ ಎದ್ದೇಳಿ, ವೀಡಿಯೊವನ್ನು ಟ್ರಿಮ್ ಮಾಡಿ, ನಂತರ ಅದನ್ನು ಅರ್ಧದಷ್ಟು ಕತ್ತರಿಸಿ ನಿಮ್ಮ ಬಾಸ್ ಅನ್ನು ಮೆಚ್ಚಿಸಲು ದಿನವಿಡೀ ಆ ವಿಡಿಯೋವನ್ನು ಹರಡಿ” ಎಂದು ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ನಿತಿನ್ ಅಗರ್ವಾಲ್ ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + three =
Remember me
