ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆ 2024ಕ್ಕೆ ಭರ್ಜರಿ ಪೈಪೋಟಿ ಎದುರಾಗುತ್ತಿದ್ದು, ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಲಿಸ್ಟ್​ನ ಅನುಸಾರ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಪಕ್ಷವು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 34 ಸಚಿವರು ಸೇರಿದ್ದಾರೆ.
ಇದನ್ನೂ ಓದಿ:ವಿವಾದದ ಅಲೆಯಲ್ಲೇ ಬಾಕ್ಸ್​ ಆಫೀಸ್​ ಧೂಳೇಬ್ಬಿಸಿದ ಸಿನಿಮಾ ಈಗ ಒಟಿಟಿಯಲ್ಲೂ ಅಬ್ಬರ! ಹೊಸ ಮೈಲಿಗಲ್ಲು ಬರೆದಿದೆ ಈ ಚಿತ್ರ
ಇದು ಮೂರನೇ ಬಾರಿಗೆ ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, 2014ರಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ನಿಂತು ಮಣಿಸಿದ್ದರು. ತದನಂತರ 2019ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಸ್ಪರ್ಧಿಸಿ, ಜಯಶಾಲಿಯಾಗಿದ್ದರು.
2024ರ ಲೋಕಸಭೆ ಚುನಾವಣೆಗೆ 195 ಸ್ಪರ್ಧಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶನಿವಾರ ಪ್ರಕಟಿಸಿದ್ದು, ಮೊದಲ ಪಟ್ಟಿಯಲ್ಲಿ 34 ಕೇಂದ್ರ ಮತ್ತು ರಾಜ್ಯ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರುಗಳಿವೆ ಎಂದು ತಾವ್ಡೆ ಹೇಳಿದರು. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅರುಣಾಚಲ ಪಶ್ಚಿಮದಿಂದ ಕಿರಣ್ ರಿಜಿಜು, ದಿಬ್ರುಗಢದಿಂದ ಸರ್ಬಾನಂದ ಸೋನೋವಾಲ್, ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ, ನವದೆಹಲಿಯಿಂದ ಬಾನ್ಸುರಿ ಸ್ವರಾಜ್, ಗಾಂಧಿನಗರದಿಂದ ಅಮಿತ್ ಶಾ, ಪೋರಬಂದರ್‌ನಿಂದ ಮನ್ಸುಖ್ ಮಾಂಡವಿಯಾ, ಸಿಆರ್ ಪಾಟೀಲ್ ಸೇರಿದ್ದಾರೆ. ನವಸಾರಿಯಿಂದ, ಗೊಡ್ಡಾದಿಂದ ನಿಶಿಕಾಂತ್ ದುಬೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ: ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಾಜ್ಯದ ಒಂದೂ ಹೆಸರಿಲ್ಲ!
ತ್ರಿಶೂರ್‌ನಿಂದ ಸುರೇಶ್ ಗೋಪಿ, ಪತ್ತನಂತಿಟ್ಟದಿಂದ ಅನಿಲ್ ಆಂಟೋನಿ, ತಿರುವನಂತಪುರದಿಂದ ರಾಜೀವ್ ಚಂದ್ರಶೇಖರ್, ಗುಣದಿಂದ ಜ್ಯೋತಿರಾದಿತ್ಯ ಸಿಂಧಿಯಾ, ವಿದಿಶಾದಿಂದ ಶಿವರಾಜ್ ಸಿಂಗ್ ಚೌಹಾಣ್, ಬಿಕಾನೇರ್‌ನಿಂದ ಅರ್ಜುನ್ ಮೇಘವಾಲ್, ಅಲ್ವಾರ್‌ನಿಂದ ಭೂಪೇಂದ್ರ ಯಾದವ್, ಜೋಧ್ಲಾದಿಂದ ಗಜೇಂದ್ರಸಿಂಗ್ ಸೆಖಾವತ್, ಮಥುರದಿಂದ ಹೇಮಾ ಮಾಲಿನಿ, ಅಮೇಥಿಯಿಂದ ಸೃತಿ ಇರಾನಿ, ವಾರಾಣಾಸಿಯಿಂದ ನರೇಂದ್ರ ಮೋದಿ, ಕರೀಂನಗರದಿಂದ ಬಂಡಿ ಸಂಜಯ್ ಕುಮಾರ್, ಸಿಕಂದರಾಬಾದ್‌ನಿಂದ ಜಿ. ಕಿಶನ್ ರೆಡ್ಡಿ, ಬಿ. ಮುರುಳಿಧರನ್, ಸಾದ್ವಿ ನಿರಂಜನ್ ಜ್ಯೋತಿ, ಸತ್ಯಪಾಲ್ ಸಿಂಗ್ ಬಘೇಲ್, ರವಿಕಿಶನ್, ಸಂತೋಷ್ ಪಾಂಡೆ, ರಂಜೀತ್ ದತ್ತ, ಸುರೇಶ್ ಭೋರ, ಪೂನಂ ಆನಂದ್ ನಿತೇಶ್ ಬಾಯ್​ ಪಟೇಲ್, ಪುರುಷೋತ್ತಮ್ ಬಾಯ್, ದಿನೇಶ್ ಬಾಯ್, ರೇಖಾ ಬೆನ್, ಕೃಷ್ಣ ಗೋಪಿ, ರಾಜೀವ್ ಚಂದ್ರಶೇಖರ್ ಲೋಕ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು. ಸಂಪೂರ್ಣ ಪಟ್ಟಿಯ ವಿವರ ಈ ಕೆಳಕಂಡಂತಿದೆ ಗಮನಿಸಿ.
BJP releases first list of 195 candidates for Lok Sabha electionspic.twitter.com/ms1zTtzLfL
— ANI (@ANI)March 2, 2024

ಉತ್ತರ ಪ್ರದೇಶ 51 ಕ್ಷೇತ್ರ, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶದಿಂದ 24, ಗುಜರಾತ್‌ 15, ರಾಜಸ್ಥಾನ 15, ಕೇರಳ 12, ಅಸ್ಸಾಂ 11, ತೆಲಂಗಾಣ 9, ಜಾರ್ಖಂಡ್‌ 11, ಛತ್ತೀಸ್‌ಗಢ 11, ಹೊಸದಿಲ್ಲಿ 5, ಜಮ್ಮು ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2 ಹಾಗೂ ಗೋವಾ, ತ್ರಿಪುರ, ಅಂಡಮಾನ್‌- ನಿಕೋಬಾರ್‌, ದಿಯು ಮತ್ತು ದಮನ್‌ಗಳ ತಲಾ ಒಂದು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ.
ಆಧಾರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ…..ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ನಿಜಕ್ಕೂ ಪಾಪ ಅನಿಸುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 18 =
Remember me
