ನವದೆಹಲಿ:ಕಳೆದ 7 ವರ್ಷಗಳಿಂದ ಕಾರ್ಪೆರೇಟ್ ಸಂಸ್ಥೆಗಳು ಸೇರಿ ಇತರ ಮೂಲಗಳಿಂದ ದೇಣಿಗೆ ಸಂಗ್ರಹಿಸುವಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿದೆ. 2012-13 ರಿಂದ 2018-19ರ ನಡುವೆ ಎಲ್ಲ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆ  2,818.05 ಕೋಟಿ ರೂ. ಆಗಿದೆ. ಇದರಲ್ಲಿ ಶೇಕಡ 82.3 ಅಂದರೆ 2,319.48 ಕೋಟಿ ರೂ.ನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್​​ (ಎಡಿಆರ್) ವರದಿಯಲ್ಲಿ ತಿಳಿಸಿದೆ. ರಾಜಕೀಯ ಪಕ್ಷಗಳು ಪ್ರತಿವರ್ಷ ಪಡೆದ ದೇಣಿಗೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತವೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್​ನ ದೇಣಿಗೆ ಸಂಗ್ರಹ ಕಡಿಮೆ ಇದೆ. ಕಳೆದ 7 ವರ್ಷಗಳಲ್ಲಿ 376.02 ಕೋಟಿ ರೂ.ದೇಣಿಗೆ ಪಡೆದಿದೆ. ಎನ್​ಸಿಪಿ  69.81 ಕೋಟಿ ರೂ., ತೃಣಮೂಲ ಕಾಂಗ್ರೆಸ್  45.01 ಕೋಟಿ ರೂ., ಸಿಪಿಐ-ಎಂ  7.5 ಕೋಟಿ  ರೂ. ಮತ್ತು ಸಿಪಿಐ  22 ಲಕ್ಷ ರೂ. ದೇಣಿಗೆ ಪಡೆದಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2012-13ರಲ್ಲಿ ಬಿಜೆಪಿಗೆ  72.99 ಕೋಟಿ ರೂ. ದೇಣಿಗೆ ಹರಿದುಬಂದಿತ್ತು. ಅದು ಮುಂದಿನ ಹಣಕಾಸು ವರ್ಷಕ್ಕೆ 156.98 ಕೋಟಿ ರೂ.ಗೆ ಏರಿಕೆಯಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್ ಆ ವರ್ಷ ಕೇವಲ 7.54 ಕೋಟಿ ರೂ.ದೇಣಿಗೆ ಸಂಗ್ರಹಿಸಿತ್ತು.
ರಾಷ್ಟ್ರೀಯ ಪಕ್ಷಗಳು ಕಾರ್ಪೆರೇಟ್ ಸಂಸ್ಥೆಗಳಿಂದ ದೇಣಿಗೆ ಪಡೆಯುವ ಪ್ರಮಾಣ ಶೇಕಡ 131ರಷ್ಟು ಹೆಚ್ಚಾಗಿದೆ ಎಂದು ಎಡಿಆರ್ ತಿಳಿಸಿದೆ. 2018-19ರ ಹಣಕಾಸು ವರ್ಷದಲ್ಲಿ 1,573 ಕಾಪೋರೇಟ್ ಕಂಪನಿಗಳಿಂದ ಬಿಜೆಪಿಗೆ  698.08 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಕಾಂಗ್ರೆಸ್  122.5 ಕೋಟಿ ರೂ. ದೇಣಿಗೆ ಪಡೆದಿದೆ. 2018-19ರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿಗೆ ಟಾಟಾ ಸಮೂಹದ ಪ್ರೊಗ್ರೆಸ್ಸಿವ್ ಎಲೆಕ್ಟ್ರಾಲ್ ಟ್ರಸ್ಟ್ ಪ್ರಮುಖ ದೇಣಿಗೆದಾರ ಸಂಸ್ಥೆಯಾಗಿದ್ದು, ಒಂದೇ ವರ್ಷದಲ್ಲಿ ಮೂರು ಪಕ್ಷಗಳಿಗೆ ಮೂರು ಬಾರಿಗಳಲ್ಲಿ ಒಟ್ಟು  455.15 ಕೋಟಿ ರೂ. ದೇಣಿಗೆ ನೀಡಿದೆ.

ಭದ್ರತೆ ಹಿಂದಕ್ಕೆ ಪಡೆದ ಪಂಜಾಬ್​: ಕೆಚ್ಚೆದೆಯ ಯೋಧ ಬಲ್ವಿಂದರ್​ ಗುಂಡಿಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 11 =
Remember me
