ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಮೇ 19ಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವರಿಷ್ಠರು ನಿಗದಿಪಡಿಸಿದ ಮಾನದಂಡದಂತೆ ಜಾತಿ-ವರ್ಗವಾರು ಆದ್ಯತೆ ನೀಡಿ ರಾಜ್ಯಸಭೆಯ ಐದು, ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ 30 ಅಭ್ಯರ್ಥಿಗಳ ಹೆಸರು ಶಿಫಾರಸಾಗಿವೆ.
ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ತೆಗೆದುಕೊಂಡ ತೀರ್ವನದ ಪ್ರಕಾರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆಯಾಗಿದ್ದು, ಪಕ್ಷದ ಕೇಂದ್ರ ಚುನಾವಣೆ ಸಮಿತಿಗೆ ಮುಂದಿನ ಜವಾಬ್ದಾರಿ ಒಪ್ಪಿಸಿ ರಾಜ್ಯ ನಾಯಕರು ಕೈತೊಳೆದುಕೊಂಡಿದ್ದಾರೆ.
ರಾಜ್ಯಸಭೆಯ ಎರಡು ಸ್ಥಾನಗಳ ಪೈಕಿ ಒಂದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರಾಯ್ಕೆ ಬಹುತೇಕ ಖಚಿತವಾಗಿದೆ. ಮತ್ತೊಂದು ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ ಜತೆಗೆ ನಿರ್ಮಲ್ ಕುಮಾರ್ ಸುರಾನಾ, ಪ್ರಕಾಶ್ ಶೆಟ್ಟಿ ಮತ್ತು ಲೆಹರ್​ಸಿಂಗ್ ಸಿರೋಯಿ ಹೆಸರು ಕಳುಹಿಸಿದೆ.
ಜೆಡಿಎಸ್ ಪರೋಕ್ಷ ಬೆಂಬಲದೊಂದಿಗೆ ಮೂರನೇ ಸ್ಥಾನಕ್ಕೆ ತಟಸ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆದಿದ್ದು, ದೆಹಲಿಮಟ್ಟದಲ್ಲಿ ಮತ್ತೊಂದು ಸುತ್ತಿನ ಚರ್ಚೆಯಾಗುವ ಸಾಧ್ಯತೆಗಳಿವೆ.
ವಿಧಾನ ಪರಿಷತ್​ನ ಏಳು ಸ್ಥಾನಗಳ ಪೈಕಿ ನಾಲ್ಕು ಪಕ್ಷಕ್ಕೆ ಲಭ್ಯವಾಗಲಿದೆ. ಸಂಭಾವ್ಯರ ದೊಡ್ಡ ಪಟ್ಟಿ ಸಲ್ಲಿಕೆ ಜತೆಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಉಳಿದಿದೆ.
ರಾಜ್ಯ ನಾಯಕರಿಗೆ ಆಹ್ವಾನ:ಇದೇ ಮೊದಲ ಬಾರಿಗೆ ಪಕ್ಷದ ರಾಜ್ಯ ನಾಯಕರಿಗೂ ಆಹ್ವಾನ ದೊರೆತಿದ್ದು, ಕೇಂದ್ರ ಚುನಾವಣಾ ಸಮಿತಿ ಸಭೆಗೆ ಮುನ್ನ ಅಭಿಪ್ರಾಯ ಪಡೆಯುವುದು ಈ ಕರೆಯ ಉದ್ದೇಶವೆಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಪ್ರಯತ್ನಿಸುವುದೋ? ಬೇಡವೋ? ವಿಧಾನ ಪರಿಷತ್​ಗೆ ಯಾವೆಲ್ಲ ಹೆಸರುಗಳನ್ನು ಪರಿಗಣಿಸಬಹುದು ಎಂಬ ಬಗ್ಗೆ ವರಿಷ್ಠರು ವಿಚಾರ-ವಿನಿಮಯ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ರಾಜ್ಯ ಸಮಿತಿ ಶಿಫಾರಸು ಬದಿಗಿಟ್ಟು, ವರಿಷ್ಠರು ಅಚ್ಚರಿ ಆಯ್ಕೆಗಳನ್ನು ಮಾಡಿದ್ದರು. ಈ ಬಾರಿ ಸಭೆಗೆ ಮುನ್ನ ರಾಜ್ಯ ಮುಖಂಡರ ಜತೆಗೆ ರ್ಚಚಿಸಲು ಬಯಸಿರುವುದು ಗಮನಾರ್ಹ ಬೆಳವಣಿಗೆಯಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಹಾಗೂ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ಸೋಮವಾರ ರಾಜೀನಾಮೆ ಪ್ರಕಟಿಸಿದರೆ, ಇತ್ತ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್ ಲಿಂಬಿಕಾಯಿ ಸ್ವತಂತ್ರವಾಗಿ ಸ್ಪರ್ಧಿಸ್ತಾರಾ? ಎಂಬ ಕುತೂಹಲದ ಚರ್ಚೆ ಆಡಳಿತ ಪಕ್ಷದಲ್ಲಿ ಶುರುವಾಗಿದೆ.
ಸಭಾಪತಿ ಕೊಠಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೊರಟ್ಟಿ ನಿರ್ಧಾರ ಘೋಷಿಸಿ, ಉಪಸಭಾಪತಿಗೆ ಬರೆದ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿ ಕೆ.ಆರ್.ಮಹಾಲಕ್ಷಿ್ಮೕ ಅವರಿಗೆ ಸಲ್ಲಿಸಿದರು. ಮಂಗಳವಾರ ಬಿಜೆಪಿಗೆ ಸೇರುವೆ, ಯಾವುದೇ ಷರತ್ತು ವಿಧಿಸಿಲ್ಲ. ಕೇಂದ್ರ ಸಚಿವ ಅಮಿತ್ ಷಾ ಭೇಟಿ ವೇಳೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿ ರಾಜಕೀಯ ನಿಲುವಿಗೆ ಆಕ್ಷೇಪವಿಲ್ಲ. ಎಲ್ಲ ಪಕ್ಷಗಳಿಂದ ಸಹಕಾರ ದೊರೆತಿದೆ ಎಂದರು.
ಪಶ್ಚಿಮ ಕೊತ ಕೊತ:ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಗೆದ್ದಿರುವ ಹೊರಟ್ಟಿ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಎಂಟನೇ ಬಾರಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಇದು, ಕ್ಷೇತ್ರದಲ್ಲಿ ಬಿಜೆಪಿಯು ಕೊತ ಕೊತನೆ ಕುದಿಯುವಂತೆ ಮಾಡಿದೆ. ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಈ ಬಾರಿ ಪಕ್ಷದಿಂದ ಕಣಕ್ಕಿಳಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಬಿಜೆಪಿ ಹಿರಿಯ ನಾಯಕರ ಖಚಿತ ಭರವಸೆ ಮೇರೆಗೆ ಹೊರಟ್ಟಿ ಹೆಜ್ಜೆ ಮುಂದಿಟ್ಟಿದ್ದು, ಲಿಂಬಿಕಾಯಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಬಿಜೆಪಿಯೊಳಗೆ ಬಿಸಿ ಚರ್ಚೆ ಹುಟ್ಟುಹಾಕಿದೆ.
ನನ್ನ ಸೇರ್ಪಡೆಗೆ ಬಿಜೆಪಿಯಲ್ಲಿ ಯಾವುದೇ ವಿರೋಧವಿಲ್ಲ. ಆದರೆ ಒಬ್ಬರನ್ನು ಬಿಟ್ಟು ಉಳಿದ ಯಾರಿಗೂ ತಕರಾರಿಲ್ಲ, ವಿರೋಧವೂ ವ್ಯಕ್ತವಾಗಿಲ್ಲ.
|ಬಸವರಾಜ ಹೊರಟ್ಟಿನಿರ್ಗಮಿತ ಸಭಾಪತಿ
ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆಗೆ ರ್ಚಚಿಸಿದ ನಂತರ ಮುಂದಿನ ನಡೆಯ ಬಗ್ಗೆ ತೀರ್ವನಿಸುವೆ.
|ಮೋಹನ್ ಲಿಂಬಿಕಾಯಿಮಾಜಿ ಎಂಎಲ್ಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
