ನವದೆಹಲಿ:ದೆಹಲಿಯ ಹಲವು ಭಾಗಗಳಲ್ಲಿ ಕೋಮುಗಲಭೆ ನಡೆಯುತ್ತಿದ್ದು ಹಿಂಸಾಚಾರ ಮಿತಿಮೀರಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಬಣಗಳ ನಡುವೆ ಶುರುವಾದ ಸಂಘರ್ಷದಿಂದಾಗಿ ದೆಹಲಿಯಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ಮನೆಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಪ್ರತಿಭಟನಾಕಾರರ ಕೌರ್ಯಕ್ಕೆ ತುತ್ತಾದ ಮುಸ್ಲಿಂ ಕುಟುಂಬವನ್ನು ಬಿಜೆಪಿ ಕೌನ್ಸಿಲರ್​ ಓರ್ವರು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ಸುಮಾರು 150 ಜನರಿದ್ದ ಪ್ರತಿಭಟನಾಕಾರರ ಗುಂಪೊಂದು ಶಾಹೀದ್​ ಸಿದ್ಧಕಿ ಎಂಬುವರ ಮನೆಗೆ ಬೆಂಕಿ ಹಚ್ಚಲು ಮುಂದಾಗಿತ್ತು. ಆದರೆ ಯಮುನಾ ವಿಹಾರ ವಾರ್ಡ್​ನ ಬಿಜೆಪಿ ಕೌನ್ಸಿಲರ್​ ಪ್ರಮೋದ್ ಗುಪ್ತಾ ಅದಕ್ಕೆ ಅವಕಾಶ ಕೊಡದೆ, ಕುಟುಂಬವನ್ನೂ ರಕ್ಷಿಸಿದ್ದಾರೆ. ಸಿದ್ಧಕಿ ಅವರು ಇಂಡಿಯಾ ಟುಡೇಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.ನಿನ್ನೆ ರಾತ್ರಿ 11.30ರ ಹೊತ್ತಿಗೆ ಉದ್ರಿಕ್ತರ ಗುಂಪೊಂದು ಜೈ ಶ್ರೀರಾಮ್​ ಎನ್ನುತ್ತ ತಮ್ಮ ಮನೆಯ ಪಕ್ಕದಲ್ಲೇ ಹಾದುಹೋಗುತ್ತಿತ್ತು. ಪೊಲೀಸರು ಇಲ್ಲದ ರಸ್ತೆಯಿಂದ ಈ ಗುಂಪು ಪ್ರವೇಶ ಮಾಡಿತು. ಇದೇ ರಸ್ತೆಯ ಇನ್ನೊಂದು ಬದಿಯಲ್ಲಿ ಮುಸ್ಲಿಮರು ಜಾಸ್ತಿಯಿದ್ದುದರಿಂದ ಅಲ್ಲಿ ಯಾವುದೇ ಪ್ರತಿಭಟನೆ ಆಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್​ ಕಾವಲು ಇತ್ತು.
ಈ ಪ್ರತಿಭಟನಾಕಾರರು ಮೊದಲು ನನ್ನ ಮನೆಯ ಕೆಳಗೆ ಇದ್ದ ಬಾಡಿಗೆದಾರನ ಅಂಗಡಿಯನ್ನು ಸುಟ್ಟು ಹಾಕಿದರು. ನಮ್ಮ ಮನೆಯ ಗ್ಯಾರೇಜ್​ನಲ್ಲಿದ್ದ ಕಾರು, ಬೈಕ್​ಗಳನ್ನು ಕೂಡ ಹಾಳುಮಾಡಲು ಪ್ರಯತ್ನಿಸಿದರು. ಗ್ಯಾರೇಜ್​ನಲ್ಲಿದ್ದ ವಾಹನಗಳನ್ನು ಹೊರತೆಗೆದು ಸುಡಲು ಯತ್ನಿಸಿದರು. ಎಲ್ಲ ಸೇರಿ ಸುಮಾರು 20 ಲಕ್ಷ ರೂಪಾಯಿ ನಷ್ಟವಾಯಿತು.ಆದರೆ ಅಷ್ಟರಲ್ಲಿ ಆಗಮಿಸಿದ ಬಿಜೆಪಿ ಕೌನ್ಸಿಲರ್​ ಪ್ರಮೋದ್​ ಗುಪ್ತಾ ನಮ್ಮನ್ನೆಲ್ಲ ರಕ್ಷಿಸಿದರು. ಹಾಗೇ ಪ್ರತಿಭಟನಾಕಾರರ ಗುಂಪನ್ನು ತಮ್ಮ ಸಹಾಯಕರೊಂದಿಗೆ ಚದುರಿಸಿ ಆಸ್ತಿಪಾಸ್ತಿ ಹಾನಿಯಾಗುವುದನ್ನು ತಪ್ಪಿಸಿದರು.
ಪ್ರಮೋದ್​ ಗುಪ್ತಾ ನನ್ನ ಬಹುಕಾಲದ ಸ್ನೇಹಿತರೂ ಹೌದು. ಎರಡು ತಿಂಗಳ ಮಗು ಬೇರೆ ಇತ್ತು. ನಾವೆಲ್ಲ ಅದೃಷ್ಟವಶಾತ್​ ಪಾರಾದೆವು ಎಂದು ಸಿದ್ಧಕಿ ಹೇಳಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
