ಕಣ್ಣೂರು:ದೇಶದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಅಶಾಂತಿ ಸೃಷ್ಟಿಸುವ ಮೂಲಕ ವೈವಿಧ್ಯತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆರೋಪಿಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ಮುಂಬರುವ ಚುನಾವಣೆಯು ಬಹುಶಃ ದೇಶದ ಆಧುನಿಕ ಇತಿಹಾಸದಲ್ಲಿ ಭಾರತದ ಸಂವಿಧಾನ ಮತ್ತು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯ ನಡುವಿನ ಹೋರಾಟ ಎಂದು ಹೇಳಿದ್ದಾರೆ.
ದೇಶದಲ್ಲಿ ಇಂದು ಬಿಜೆಪಿ ಮಾಡುತ್ತಿರುವ ಕೃತ್ಯಗಳನ್ನು ಹಿಂದೆ ಯಾವ ರಾಜಕೀಯ ಪಕ್ಷವೂ ಮಾಡಿರಲಿಲ್ಲ. ಸಂವಿಧಾನವು ಆಧುನಿಕ ಭಾರತದ ಅಡಿಪಾಯವಾಗಿದೆ. ಇದು ನಮ್ಮ ಜನರಿಗೆ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ನೀಡುತ್ತದೆ. ಸರ್ಕಾರಿ ಸಂಸ್ಥೆಗಳು ನಾಗರಿಕರ ಹಕ್ಕುಗಳ ರಕ್ಷಕರಾಗಿರಬೇಕು.
ಇದನ್ನೂ ಓದಿ:ಉತ್ತಮ ಪ್ರದರ್ಶನದ ನಡುವೆಯೆ ಸಿಎಸ್​ಕೆಗೆ ಶಾಕ್; ಐಪಿಎಲ್​ನಿಂದ ಸ್ಟಾರ್​ ಬ್ಯಾಟ್ಸ್​ಮನ್​
ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ತನ್ನ ರಾಜಕೀಯ ಅಸ್ತ್ರಗಳಾಗಿ ಬಳಸಿಕೊಂಡು ದೇಶದ ಸ್ವಾರೂಪವನ್ನು ಬದಲಾಯಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ದೇಶದ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತವೆ. ಆದರೆ, ಬಿಜೆಪಿ ಜನರ ಮೇಲೆ ಏಕರೂಪ ನಾಗರೀಕ ಸಂಹಿತೆ (UCC)ಯನ್ನು ಹೇರುವ ಮೂಲಕ ದೇಶದ ವೈವಿಧ್ಯತೆಯನ್ನು ಬದಲಾಯಿಸಲು ಹೊರಟಿದೆ.
ನಾನು ಈ ಮೂಲಕ ಬಿಜೆಪಿಯವರಿಗೆ ಹೇಳಲು ಬಯಸುವುದು ಏನೆಂದರೆ ನೀವು ವ್ಯರ್ಥ ಪ್ರಯತ್ನ ಮಾಡುವ ಮೂಲಕ ಜನರ ಸಮಯವನ್ನು ಹಾಳು ಮಾಡುತ್ತಿದ್ದೀರಾ. ಇದರಿಂದ ಜನರಿಗೆ ಹಾನಿಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
