ಚಂಡೀಗಢ: ಹರಿಯಾಣದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಷಾ ಆರೋಪಿಸಿದ್ದಾರೆ.
ಇದನ್ನು ಓದಿ:ಮನೀಶ್​​ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ: ಸಿಬಿಐ, ಇಡಿಗೆ ಸುಪ್ರೀಂಕೋರ್ಟ್​​ ನೋಟಿಸ್​ ಜಾರಿ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮ್ಮಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದೆ. ಇಲ್ಲಿಗೆ ಬಂದರೆ (ಹರಿಯಾಣ) ಇಲ್ಲಿಯೂ ಅದನ್ನೇ ಮಾಡುತ್ತಾರೆ. ಹರಿಯಾಣದಲ್ಲಿ ಯಾವುದೇ ಸಂದರ್ಭದಲ್ಲೂ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ. ನಾನು ನಿಮಗೆಲ್ಲರಿಗೂ ಭರವಸೆ ನೀಡುತ್ತೇನೆ ಎಂದಿದ್ದಾರೆ.
1957ರಲ್ಲಿ ಒಬಿಸಿ ಮೀಸಲಾತಿಗಾಗಿ ಕಾಕಾ ಕಾಲೇಲ್ಕರ್ ಆಯೋಗವನ್ನು ರಚಿಸಲಾಯಿತು, ಆದರೆ ಕಾಂಗ್ರೆಸ್ ಅದನ್ನು ಹಲವು ವರ್ಷಗಳವರೆಗೆ ಜಾರಿಗೊಳಿಸಲಿಲ್ಲ. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ ಎಂದು ಆರೋಪಿಸಿದರು. 1980 ರಲ್ಲಿ, (ಅಂದಿನ ಪ್ರಧಾನಿ) ಇಂದಿರಾಗಾಂಧಿ ಮಂಡಲ್ ಆಯೋಗವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದರು. 1990 ರಲ್ಲಿ ಅದನ್ನು ಅಂಗೀಕರಿಸಿದಾಗ ರಾಜೀವ್ ಗಾಂಧಿ ಅವರು ಎರಡೂವರೆ ಗಂಟೆಗಳ ಭಾಷಣವನ್ನು ನೀಡಿ ಒಬಿಸಿ ಮೀಸಲಾತಿಯನ್ನು ವಿರೋಧಿಸಿದರು ಎಂದು ಟೀಕಿಸಿದರು.
ಜಾತೀಯತೆ ಮತ್ತು ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಹರಿಯಾಣಕ್ಕೆ ಏನನ್ನೂ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಒಂದು ಸರ್ಕಾರ ಬಂದಾಗ ಭ್ರಷ್ಟಾಚಾರ ಉತ್ತುಂಗಕ್ಕೇರಿತು, ಮತ್ತೊಂದು ಸರ್ಕಾರ ಬಂದಾಗ ಗೂಂಡಾಗಿರಿ ಉತ್ತುಂಗಕ್ಕೇರಿತು. ಒಂದು ಸರ್ಕಾರ ಒಂದು ಜಿಲ್ಲೆಯನ್ನು ಅಭಿವೃದ್ದಿ ಪಡಿಸಿದರೆ ಇನ್ನೊಂದು ಸರ್ಕಾರ ಇನ್ನೊಂದು ಪ್ರದೇಶದ ಅಭಿವೃದ್ದಿ ಮಾಡುತ್ತಿತ್ತು. ಇಡೀ ಹರಿಯಾಣವನ್ನು ಅಭಿವೃದ್ಧಿಪಡಿಸುವ ಸರ್ಕಾರವನ್ನು ನೀಡಲು ಬಿಜೆಪಿ ಕೆಲಸ ಮಾಡಿದೆ.
ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ಬಳಿಕ ನನ್ನ ಈ ಸರ್ಕಾರ ದಲಿತರು, ಬಡವರು ಮತ್ತು ಹಿಂದುಳಿದವರ ಸರ್ಕಾರ ಎಂದು ಇಡೀ ದೇಶಕ್ಕೆ ಹೇಳಿದ್ದರು. ದೇಶಕ್ಕೆ ಮೊದಲ ಬಲಿಷ್ಠ ಹಿಂದುಳಿದ ವರ್ಗದ ಪ್ರಧಾನಿಯನ್ನು ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ. ಹಿಂದುಳಿದ ವರ್ಗಗಳ 71 ಸಚಿವರಲ್ಲಿ 27 ಮಂದಿಯನ್ನು ನೇಮಕ ಮಾಡುವ ಮೂಲಕ ನರೇಂದ್ರ ಮೋದಿ ಅವರು ಹರಿಯಾಣ ಮತ್ತು ದೇಶದ ಒಬಿಸಿಗಳನ್ನು ಗೌರವಿಸುವ ಕೆಲಸವನ್ನು ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹರಿಯಾಣದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದರು. (ಏಜೆನ್ಸೀಸ್​​)
ಸುಪ್ರೀಂಕೋರ್ಟ್​​ಗೆ ಇಬ್ಬರು ಹೊಸ ನ್ಯಾಯಧೀಶರ ನೇಮಕ; ಅಧಿಕೃತ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + thirteen =
Remember me
