ನವದೆಹಲಿ:ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಂತರದೊಂದಿಗೆ ಜಯಭೇರಿ ಭಾರಿಸಿರುವ ಎಎಪಿಯ ಅರವಿಂದ್​ ಕೇಜ್ರಿವಾಲ್​ಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ವರ್ಗೀಯಾ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ದೆಹಲಿಯ ಪ್ರತಿ ಶಾಲೆ ಮದ್ರಸಾಗಳಲ್ಲಿ ಹನುಮಾನ್​ ಚಾಲೀಸ ಪಠಿಸುವುದು ಕಡ್ಡಾಯ ಮಾಡಬೇಕೆಂದು ನೂತನ ಮುಖ್ಯಮಂತ್ರಿಯಲ್ಲಿ ಕೇಳಿಕೊಂಡಿದ್ದಾರೆ.
ನೂತನ ಸಿಎಂಗೆ ಟ್ವಿಟ್ಟರ್​ನಲ್ಲಿ ಶುಭ ಹಾರೈಸಿರುವ ಕೈಲಾಶ್​ ಜಯ್​ವರ್ಗೀಯಾ, “ಹನುಮಾನ್​ ಜೀಯಲ್ಲಿ ನಂಬಿಕೆ ಇಡುವವರಿಗೆ ದೇವರು ಖಂಡಿತವಾಗಿಯೂ ಹರಸುತ್ತಾನೆ. ದೆಹಲಿಯ ಎಲ್ಲ ಶಾಲಾ ಕಾಲೇಜು, ಮದ್ರಾಸ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹನುಮಾನ್​ ಚಾಲೀಸ ಪಠಣವನ್ನು ಕಡ್ಡಾಯ ಮಾಡುವ ಸಮಯ ಬಂದಿದೆ. ದೆಹಲಿಯ ಮಕ್ಕಳು ಭಜರಂಗಿಯ ಕೃಪೆಯಿಂದ ಏಕೆ ವಂಚಿತರಾಗಬೇಕು?” ಎಂದು ಟ್ವೀಟ್​ ಮಾಡಿದ್ದಾರೆ.
ಇಂದು ಬೆಳಗ್ಗೆ ಕೈಲಾಶ್​ ಜಯ್​ವರ್ಗೀಯಾವರು ಈ ಟ್ವೀಟ್​ ಮಾಡಿದ್ದು ಜನ ಸಾಮಾನ್ಯರು ಟ್ವೀಟ್​ನ ಕುರಿತಾಗಿ ಅಸಮಾಧಾನವನ್ನು ಹೊರ ಹಾಕಲಾರಂಭಿಸಿದ್ದಾರೆ. ಜಮ್ಮುವಿನಿಂದ ನಮ್ಮನ್ನು ಓಡಿಸಿದಿರಿ, ಆಮೇಲೆ ಬಂಗಾಳದಿಂದಲೂ ಓಡಿಸಿದಿರಿ ಈಗ ದೆಹಲಿಯಿಂದಲೂ ಓಡಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ತಮ್ಮ ಆಕ್ರೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ.(ಏಜೆನ್ಸೀಸ್​)
.@ArvindKejriwalजी को जीत की बधाई !
निश्चित ही जो हनुमानजी की शरण में आता है उसे आशीर्वाद मिलता है। अब समय आ गया है कि हनुमान चालीसा का पाठ दिल्ली के सभी विद्यालयों, मदरसो सहित सभी शैक्षणिक संस्थानों में भी जरूरी हो।
बजरंगबली की कृपा से अब 'दिल्लीवासी' बच्चे क्यों वंचित रहे❓
— Kailash Vijayvargiya (@KailashOnline)February 12, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
