ನವದೆಹಲಿ:ಇತ್ತೀಚೆಗೆ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಇಂದು ಮತ್ತೆ ಟ್ವೀಟ್​ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.
ಬಿಜೆಪಿ ಮೂರು ವಿಚಾರಗಳಲ್ಲಿ ಸುಳ್ಳುಗಳನ್ನೇ ಸತ್ಯವೆಂದು ನಂಬಿಸುತ್ತಿದೆ. ಕೊವಿಡ್​ 19 ಸಾಂಕ್ರಾಮಿಕ ರೋಗ, ಭಾರತದ ಆರ್ಥಿಕತೆ ಮತ್ತು ಭಾರತ-ಚೀನಾ ಗಡಿ ಬಿಕ್ಕಟ್ಟು ಈ ಮೂರು ವಿಷಯಗಳಲ್ಲಿ ಕೇಂದ್ರ ಸರ್ಕಾರ ಸುಳ್ಳುಗಳನ್ನೇ ಸಾಂಸ್ಥಿಕಗೊಳಿಸಿ, ಅದನ್ನೇ ಜನರ ತಲೆಯಲ್ಲಿ ತುಂಬುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೊವಿಡ್​-19 ಟೆಸ್ಟ್​ಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಹಾಗೂ ಸಾವುಗಳ ಬಗ್ಗೆ ತಪ್ಪಾಗಿ ವರದಿ ನೀಡಲಾಗುತ್ತಿದೆ. ಇನ್ನು ಆರ್ಥಿಕತೆ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರ ಹೊಸ ಲೆಕ್ಕಾಚಾರ ವಿಧಾನವನ್ನೇ ಅಳವಡಿಸಿಕೊಂಡು, ಜಿಡಿಪಿ ಬಗ್ಗೆ ಸುಳ್ಳು ಹೇಳುತ್ತಿದೆ. ಹಾಗೇ ಮೂರನೇಯದಾಗಿ ಮಾಧ್ಯಮಗಳನ್ನು ಬೆದರಿಸುವ ಮೂಲಕ ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಪಟ್ಟ ವಾಸ್ತವವನ್ನು ಮುಚ್ಚಿಡುತ್ತಿದೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)
ರಾಜಸ್ಥಾನ ರಾಜಕೀಯ ಆಖಾಡಕ್ಕಿಳಿದ ಗೃಹ ಸಚಿವಾಲಯ; ಫೋನ್ ಟ್ಯಾಪಿಂಗ್​ ವಿವರಣೆ ನೀಡಲು ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
