ಅಗರ್ತಲಾ:ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿಕೊಂಡು ಬಂದಿದೆ. ಆದರೆ ಅದರ ಆಡಳಿತ ರಾಷ್ಟ್ರಕ್ಕೆ ಸೀಮಿತವಾಗದೆಯೇ ವಿದೇಶಗಳಿಗೂ ಪಸರಿಸಲಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಹೇಳಿದ್ದಾರೆ.
ಭಾನುವಾರದಂದು ರಾಜಧಾನಿ ಅಗರ್ತಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಭಾರತದಲ್ಲಿ ಅಧಿಕಾರ ವಹಿಸಿಕೊಂಡು ಸುಮ್ಮನಾಗುವವರು ನಾವಲ್ಲ. ನೇಪಾಳ ಮತ್ತು ಶ್ರೀಲಂಕಾದಲ್ಲೂ ನಮ್ಮ ಪಕ್ಷದ ಆಡಳಿತಕ್ಕೆ ಬರುವಂತೆ ಮಾಡುವ ಯೋಜನೆಯನ್ನು ನಮ್ಮ ಗೃಹ ಸಚಿವರಾದ ಅಮಿತ್​ ಷಾ ಅವರು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಅಮಿತ್ ಷಾ ಅವರೊಂದಿಗಿನ ಭೇಟಿಯನ್ನು ಬಿಪ್ಲಾಬ್ ದೇಬ್ ನೆನಪಿಸಿಕೊಂಡಿದ್ದಾರೆ. ಆಗ ಅಮಿತ್​ ಷಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರೊಂದಿಗೆ ಸಭೆ ನಡೆಸಲಾಗಿತ್ತು. ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿಯ ಅಧಿಕಾರವನ್ನು ವಿಸ್ತರಿಸುವ ಯೋಜನೆಯ ಬಗ್ಗೆ ಅಂದು ಅವರು ನಮ್ಮೊಂದಿಗೆ ಚರ್ಚೆ ನಡೆಸಿದ್ದರು ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ. (ಏಜೆನ್ಸೀಸ್​)
ದಿಶಾ ರವಿ ಬಂಧನದಿಂದಾಗಿ ಕೆರಳಿದ ಪಾಕ್​! ಬಾಯಿ ಮುಚ್ಚಿಸುವ ಕೆಲಸ ನಿಮ್ಮದು ಎಂದ ಇಮ್ರಾನ್​ ಖಾನ್​

ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್​ ಮಾಡಲು ಯತ್ನಿಸಿದ ಸಚಿವ! ಕೇಸ್​ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
