ಕೋಲ್ಕತ:ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಕೇಳಿಬಂದ ಜೈ ಶ್ರೀ ರಾಮ್​ ಘೋಷಣೆ ಕೇಳಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಂಡದಂತಾಗಿದ್ದರು. ಇದೀಗ ಅವರನ್ನು ಇನ್ನಷ್ಟು ಸಿಟ್ಟಾಗುವಂತೆ ಮಾಡಿರುವ ಬಿಜೆಪಿ, ಜೈ ಶ್ರೀ ರಾಮ್​ ಹಾಡನ್ನು ಬಿಡುಗಡೆ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಜೈ ಶ್ರೀ ರಾಮ್​ ವಿಡಿಯೋವನ್ನು ಪಕ್ಷದ ಐಟಿ-ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವಿಟ್ಟರ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಅವರ ಟಿಎಂಸಿ ಪಕ್ಷ ಮಾಡುತ್ತಿರುವ ಅನ್ಯಾಯಗಳನ್ನು ವಿಡಿಯೋದಲ್ಲಿ ಜೈ ಶ್ರೀ ರಾಮ್​ ಹಾಡಿನ ಹಿನ್ನೆಲೆಯೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಅದರ ಜತೆ ಬಿಜೆಪಿಯನ್ನು ರಾಜ್ಯದ ಜನರು ಮೆಚ್ಚುತ್ತಿರುವ ಪರಿಯನ್ನೂ ತೋರಿಸಿಕೊಡಲಾಗಿದೆ. ರಾಜ್ಯದ ಪ್ರತಿ ಜನರು ಜೈ ಶ್ರೀ ರಾಮ್​ ಎನ್ನಲು ಇಚ್ಛಿಸುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೋಲ್ಕತಾದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತ್ಯುತ್ಸವವನ್ನು ನಡೆಸಲಾಗುತ್ತಿತ್ತು. ಆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಜಗದೀಶ್​ ಧನಕರ್​ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು. ಅಲ್ಲಿ ಜೈ ಶ್ರೀ ರಾಮ್​ ಘೋಷಣೆ ಕೇಳಿಬಂದಿತ್ತು. ಆ ಘೋಷಣೆ ಕೂಗಿದವರ ಮೇಲೆ ಮಮತಾ ಬ್ಯಾನರ್ಜಿ ಸಿಟ್ಟಾಗಿದ್ದರು. (ಏಜೆನ್ಸೀಸ್​)
Jai Shree Ram.pic.twitter.com/ehKlLJYuU5
— Amit Malviya (@amitmalviya)January 25, 2021

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
