ದುಬ್ಬಾಕಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದ ಶಾಸಕರಾಗಿದ್ದ ಟಿಆರ್‌ಎಸ್ ಪಕ್ಷದ ಎಸ್.ರಾಮಲಿಂಗಾ ರೆಡ್ಡಿ ಆಗಸ್ಟ್​​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇಂದು ಒಟ್ಟು 23 ಸುತ್ತುಗಳ ಮತ ಎಣಿಕೆ ನಡೆದಿತ್ತು.ಬಿಜೆಪಿಯ ಮಾಧವನೇನಿ ರಘುನಂದನ್​ ರಾವ್​ ಅವರು ಸುಮಾರು 1,118 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಟಿಆರ್​ಎಸ್​​ನ ಸೋಲಿಪೇಟಾ ಸುಜಾತಾ ಅವರನ್ನು ಸೋಲಿಸಿದ್ದಾರೆ.
ಕಾಂಗ್ರೆಸ್​ ಅಭ್ಯರ್ಥಿ ಚೆರುಕು ಶ್ರೀನಿವಾಸ್​ ರೆಡ್ಡಿ ಅವರು ಹೀನಾಯ ಸೋಲು ಕಂಡಿದ್ದಾರೆ.  ದುಬ್ಬಾಕಾದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಮಾಧವನೇನಿ ರಘುನಂದನ್​ ರಾವ್​ ಅವರಿಗೆ ಪಕ್ಷದ ಮುಖಂಡ ರಾಮ್​ ಮಾಧವ್ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಆಡಳಿತ ಟಿಆರ್​ಎಸ್​ ಬಿಜೆಪಿಯನ್ನು ಸೋಲಿಸಲು ಹಲವು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ನಡೆಸಿತ್ತು. ಆದಾಗ್ಯೂ ನಮ್ಮ ಪಕ್ಷದ ರಘುನಂದನ್​ ರಾವ್​ ಗೆದ್ದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಇವಿಎಂ ಅಸಲಿಯತ್ತು: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ ತಮ್ಮ ಪಕ್ಷದವರಿಗೆ ಹೇಳಿದ್ದೇನು?
ಈ ವಿಧಾನಸಭಾ ಕ್ಷೇತ್ರದ ಸೋಲಿನಿಂದ ಸದ್ಯ ಟಿಆರ್​ಎಸ್​ಗೆ ಯಾವುದೇ ತೊಂದರೆ ಇಲ್ಲದೆ ಇದ್ದರೂ ಮೂರು ಟಿಆರ್​ಎಸ್​, ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅದರಲ್ಲೂ ಮತ ಎಣಿಕೆಯ ಕೊನೇ ಕ್ಷಣದವರೆಗೂ ಟಿಆರ್​ಎಸ್​ ಮತ್ತು ಬಿಜೆಪಿ ನಡುವೆ ನೆಕ್​ ಟು ನೆಕ್​ ಸ್ಪರ್ಧೆ ಇದ್ದು, ಕುತೂಹಲ ಸೃಷ್ಟಿಸಿತ್ತು.
ಮೋದಿ ಹೈ ತೋ ಮುಮ್ಕಿನ್ ಹೈ; ಪ್ರಧಾನಿಯನ್ನು ಹಾಡಿ ಹೊಗಳಿದ ಯೋಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
