ಜೈಪುರ:ರಾಜಸ್ಥಾನದಲ್ಲಿ ಜೂ.19ರಂದು ರಾಜಸಭೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ಅನುಕೂಲವಾಗಲೆಂದೇ ಬಿಜೆಪಿ ರಾಜ್ಯಸಭೆ ಚುನಾವಣೆಗಳನ್ನು ಬೇಕೆಂದೇ ಎರಡು ತಿಂಗಳು ವಿಳಂಬ ಮಾಡಿತ್ತು ಎಂದು ದೂರಿದರು.
ರಾಜ್ಯಸಭೆ ಚುನಾವಣೆಗಳು ಕೊನೆಗೂ ನಿಗದಿಯಾಗಿದೆ. ಈ ಚುನಾವಣೆಗಳು ಎರಡು ತಿಂಗಳ ಹಿಂದೆಯೇ ಆಗಬೇಕಿತ್ತು. ಆದರೆ, ಶಾಸಕರ ಖರೀದಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನು ಬೇಕೆಂದೇ ವಿಳಂಬ ಮಾಡಿತ್ತು ಎಂದು ಹೇಳಿದರು.
ಬಿಜೆಪಿಗೆ ಕಾದಿದೆ ಭಾರಿ ಆಘಾತ:ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಆಘಾತ ಕಾದಿದೆ. ಈ ಆಘಾತ ನೀಡಲು ಕಾಂಗ್ರೆಸ್​ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಅಶೋಕ್​ ಗೆಹ್ಲೋಟ್​ ತಿಳಿಸಿದರು.
ಇದನ್ನೂ ಓದಿ:ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ
ಕಾಂಗ್ರೆಸ್​ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾವುದೇ ಕಾರಣಕ್ಕೂ ಮಾರಾಟವಾಗದಿರಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಪಕ್ಷದ ವಿಪ್​ ಅನ್ನು ಆನೂಚಾನವಾಗಿ ಪಾಲಿಸಲಿದ್ದಾರೆ ಎಂದು ಹೇಳಿದರು.
ಕುದುರೆ ವ್ಯಾಪಾರ ಎಷ್ಟು ಕಾಲ ನಡೆಯಲು ಸಾಧ್ಯ? ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರು ಬಿಜೆಪಿಗೆ ಆಘಾತ ನೀಡುವುದು ಶತಃಸಿದ್ಧ. ನಾವೆಲ್ಲರೂ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಇದೇ ಮನೋಭಾವ ವ್ಯಕ್ತವಾಗಿದೆ. ನಾಳೆಯೂ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು.
3 ಶಾಸಕರು ಗುಜರಾತ್​ಗೆ:ಶಾಸಕರು ಬಿಜೆಪಿಗೆ ಮಾರಾಟವಾಗುವ ಭೀತಿಯಲ್ಲಿ ಗುಜರಾತ್​ ಕಾಂಗ್ರೆಸ್​ ತನ್ನ 22 ಶಾಸಕರನ್ನು ರಾಜಸ್ಥಾನದ ಮೌಂಟ್​ ಅಬುನಲ್ಲಿರುವ ರೆಸಾರ್ಟ್​ನಲ್ಲಿ ಇರಿಸಿತ್ತು. ಇವರಲ್ಲಿ ಪ್ರಾರ್ಥನೆ ಸಲ್ಲಿಸಿಬರುವುದಾಗಿ ಹೇಳಿ ರೆಸಾರ್ಟ್​ನಿಂದ ಹೊರಬಂದಿದ್ದ ಮೂವರು ಶಾಸಕರು ಗುಜರಾತ್​ಗೆ ಮರಳಿದ್ದಾರೆ. ಹಣದ ಆಮಿಷ ಒಡ್ಡಿ ಬಿಜೆಪಿ ಇವರನ್ನು ತನ್ನೆಡೆಗೆ ಸೆಳೆದುಕೊಂಡಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ಪಾಕ್​ನ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
