ಅಮೃತಸರ:ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಆಡಳಿತ ನಡೆಸಿ, ಕೆಲ ತಿಂಗಳ ಹಿಂದಷ್ಟೇ ಮೈತ್ರಿಯನ್ನು ಮುರಿದು ಹೋದ ಶಿರೋಮಣಿ ಅಕಾಲಿ ದಳ (ಎಸ್​ಎಡಿ)ದ ನಾಯಕರು ಇದೀಗ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. ದೇಶದಲ್ಲಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​ ಬಿಜೆಪಿಯೇ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ದೂರಿದ್ದಾರೆ.
ಇದನ್ನೂ ಓದಿ:ಬೈಕ್​ ಸವಾರನ ಮೇಲೆ ಖಾಸಗಿ ಬಸ್ಸು ಹರಿದು ಸಾವು! ಸ್ಥಳೀಯರ ಆಕ್ರೋಶಕ್ಕೆ ಸುಟ್ಟು ಭಸ್ಮವಾದ ಬಸ್ಸು
ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಹಾಗೂ ಎಸ್​ಎಟಿ ಪಕ್ಷದ ಹಿರಿಯ ನಾಯಕ ಸುಖಬೀರ್​​ ಸಿಂಗ್​ ಬಾದಲ್​ ಇಂತದ್ದೊಂದು ಆರೋಪ ಮಾಡಿದ್ದಾರೆ. ‘ಬಿಜೆಪಿ ದೇಶದ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್. ಇದು ರಾಷ್ಟ್ರೀಯ ಐಕ್ಯತೆಯನ್ನು ತುಂಡುಗಳಾಗಿ ಒಡೆದಿದೆ. ಮುಸ್ಲಿಮರ ವಿರುದ್ಧ ನಾಚಿಕೆಯಿಲ್ಲದೆ ಹಿಂದೂಗಳನ್ನು ಪ್ರಚೋದಿಸುತ್ತದೆ. ಈಗ ಶಾಂತಿ ಪ್ರಿಯ ಪಂಜಾಬಿ ಹಿಂದೂಗಳನ್ನು ನಮ್ಮ ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ದೇಶಭಕ್ತ ಪಂಜಾಬ್​ನ್ನು ಬಿಜೆಪಿ ಕೋಮು ಜ್ವಾಲೆಗೆ ತಳ್ಳಲು ಪ್ರಯತ್ನಿಸುತ್ತಿದೆ’ ಎಂದು ಬಾದಲ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಅಮ್ಮನಿಗೆ 118 ಬಾರಿ ಚಾಕು ಇರಿದು ಕೊಂದ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್​ ತರಲು ಹೇಳಿದ
ಬಿಜೆಪಿ ನೇತೃತ್ವದ ಸರ್ಕಾರ ತನ್ನ ‘ಅಹಂ’ ಅನ್ನು ಬದಿಗಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)
BJP is the real#TukdeTukdeGangin the country. It has smashed national unity to pieces,shamelessly inciting Hindus against Muslims & now desperate setting peace loving Punjabi Hindus against their Sikh brethren esp#farmers. They're pushing patriotic Punjab into communal flames.pic.twitter.com/7adwVmoDgj
— Sukhbir Singh Badal (@officeofssbadal)December 15, 2020

ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
