ನವದೆಹಲಿ:ಸಂಸತ್​ ಅಧಿವೇಶನದ ವೇಳೆ ಬಿಎಸ್​ಪಿ ಸದಸ್ಯ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಕೋಮು ಹೇಳಿಕೆ ನೀಡಿರುವ ಬಿಜೆಪಿ ಸಂಸದ ರಮೇಶ್​ ಬಿಧೂರಿ ವಿಪಕ್ಷ ಹಾಗೂ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಬಿಜೆಪಿ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.
ಗುರುವಾರ ಚಂದ್ರಯಾನ-3ರ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ್ದ ರಮೇಶ್​ ಬಿಧೂರಿ ಬಿಎಸ್​ಪಿ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಇವರ ಹೇಳಿಕೆ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು ಮತ್ತು ಬಿಜೆಪಿ ಸದಸ್ಯನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು.
ಸಂಸದ ರಮೇಶ್​ ವಿರುದ್ಧ ವ್ಯಾಪಕ ದೂರು ಹಾಗೂ ಆಕ್ರೋಶ ವ್ಯಕ್ತವಾದ ಹಿನ್ನೆಲಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಜೆಪಿ ತಾವು ನೀಡಿರುವ ಹೇಳಿಕೆಗೆ ವಿವರಣೆ ನೀಡುವಂತೆ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಉತ್ತರಿಸಿದಿದ್ದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
BJP MP@rameshbidhuricalling MP Danish Ali a “Bharwa” (pimp), “Katwa” (circumcised), “Mullah Atankwadi” & “Mullah Ugrawadi” ON RECORD in Lok Sabha last night.Keeper of Maryada@ombirlakotaVishwaguru@narendramodi& BJP Prez@JPNaddaalong with GodiMedia- any action please?pic.twitter.com/sMHJqaGdUc
BJP issues show cause notice to party MP Ramesh Bidhuri on instruction of party president JP Nadda for his use of unparliamentary language against BSP MP Danish Ali: Sourcespic.twitter.com/bT5JDhclCB
ಇದನ್ನೂ ಓದಿ:ಬಹುಕೋಟಿ ವಂಚನೆ ಪ್ರಕರಣ; ಚಂದ್ರಬಾಬು ನಾಯ್ಡುಗೆ ಸದ್ಯಕ್ಕಿಲ್ಲ ರಿಲೀಫ್​
ಈ ಕುರಿತು ಲೋಕಸಬೆ ಸ್ಪೀಕರ್​ ಓಂ ಬಿರ್ಲಾಗೆ ಪತ್ರ ಬರೆದಿರುವ ಸಂಸದ ಡ್ಯಾನಿಶ್​ ಅಲಿ ನೂತನ ಸಂಸತ್​​ ಭವನದಲ್ಲಿ ನಿಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಚುನಾಯಿತ ಜನಪ್ರತಿನಿಧಿಯೊಬ್ಬನಿಗೆ ಈ ರೀತಿಯ ಮಾತುಗಳನ್ನಾಡಿರುವುದು ತುಂಬಾ ನೋವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೀವು ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಚುನಾಯಿತ ಜನಪ್ರತಿನಿಧಿಯಾಗಿ ನನ್ನಗೆ ಈ ರೀತಿಯ ಪರಿಸ್ಥಿತಿ ಇರಬೇಕಾದರೆ ಇನ್ನೂ ಸಾಮಾನ್ಯರ ಕಥೆಯೇನು. ಈ ಸಂಬಂಧ ಲೋಕಸಭೆಯ್ ಅಧ್ಯಕ್ಷರಾದ ನೀವು ವಿಚಾರಣೆ ನಡೆಸಿ ನನಗೆ ನ್ಯಾಯ ಕೊಡಿಸುತ್ತೀರಾ ಎಂಬ ವಿಶ್ವಾಸವಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
MP Danish Ali writes to Lok Sabha Speaker Om Birla regarding the speech given in Lok Sabha by BJP MP Ramesh Bidhuri; says, "I request you to refer this matter to the committee of privileges under rule 227 of the rules of procedure and conduct of business in Lok Sabha for…pic.twitter.com/w2AwZvKK1e
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
