ಉತ್ತರಾಖಾಂಡ್​:ಇತ್ತೀಚಿಗಷ್ಟೇ ಬಿಜೆಪಿ ಮುಖಂಡನ ಮಗಳು ಹಾಗೂ ಮುಸ್ಲಿಂ ಯುವಕನ ಮದುವೆ ಕುರಿತ ಹಲವಾರು ಸುದ್ದಿಗಳು ಎಲ್ಲೆಡೆ ವೈರಲ್​​​ ಆಗಿತ್ತು. ಇದಕ್ಕೆ ಭಾರೀ ಟೀಕೆ ಎದುರಾಗಿರುವ ಹಿನ್ನೆಲೆಯಲ್ಲಿ ಮೇ 28 ರಂದು ನಡೆಯಬೇಕಿದ್ದ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.
ಇದನ್ನೂ ಓದಿ:ವಿಚಿತ್ರ ಚಿಟ್ಟೆ; ಮಾನವರ ಮುಖದಂತೆ ಕಾಣುವ ಪತಂಗ ದಾವಣಗೆರೆಯಲ್ಲಿ ಪತ್ತೆ
ವಧುವಿನ ತಂದೆ ಹಾಗೂ ಪೌರಿ ಪುರಸಭೆ ಅಧ್ಯಕ್ಷನಾಗಿರುವ ಯಶಪಾಲ್ ಬೇನಮ್, ತನ್ನ ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೇನೆ ಎಂದು ಹೇಳಿದ್ದರು. ಅಲ್ಲದೇ, ಮಗಳ ಮದುವೆ ಕಾರ್ಡ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಅನೇಕ ಹಿಂದುತ್ವ ಸಂಘಟನೆಗಳು ಬಿಜೆಪಿ ಮುಖಂಡನ ಮಗಳು ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದನ್ನು ವಿರೋಧಿಸಿ, ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಈ ಮದುವೆಗೆ ಸಂಬಂಧಿಸಿಂತೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಾಗಿತ್ತು.
ಹೀಗಾಗಿ, ತಾವು ಸಾರ್ವಜನಿಕರ ಮಾತಿಗೆ ಗೌರವ ನೀಡುವುದರ ಜೊತೆಗೆ ಮೇ 28ರಂದು ನಡೆಯಬೇಕಿದ್ದ ತಮ್ಮ ಮಗಳ ಮದುವೆಯನ್ನು ರದ್ದುಗೊಳಿಸಿರುವುದಾಗಿ ಯಶಪಾಲ್ ಬೇನಮ್ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
