ಚೆನೈ:ಬಿಜೆಪಿ ಮುಖಂಡರೊಬ್ಬರನ್ನು ಅಪರಿಚಿತರ ತಂಡವೊಂದು ಅಡ್ಡಗಟ್ಟಿ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಶ್ರೀ ಪೆರಂಬೂರು ಬಳಿಯ ನಜರತ್​ಪೇಟೆ ಬಳಿ ನಡೆದಿದೆ.
ಶ್ರೀಪೆರಂಬೂರು ಸಮೀಪದ ವಲರಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ.ಜಿ. ಶಂಕರ್​(42) ಕೊಲೆಯಾಗಿರುವವರು.
ತಮಿಖಳುನಾಡು ಬಿಜೆಪಿ ಎಸ್​ಸಿ-ಎಸ್​ಟಿ ವಿಭಅಗದ ರಾಜ್ಯ ಖಜಾಂಜಿ ಆಗಿರುವ ಶಂಕರ್​ ಕಾರ್ಯಕ್ರಮ ಒಂದನ್ನು ಮುಗಿಸಿಕೊಂಡು ಮನೆಗೆ ಹಿಂಇತುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮದುವೆಯಾಗಲು ನಿರಾಕರಣೆ; ಯುವತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಗಲ್​ ಪ್ರೇಮಿ
ಪೂನಮಲ್ಲೆ ಹೆದ್ದಾರಿಯ ನಸರತ್‌ಪೇಟೆ ಸಿಗ್ನಲ್‌ ಬಳಿ ಕಾರು ಬಂದಾಗ ಏಕಾಏಕಿ ಶಂಕರ್‌ ಅವರ ಕಾರನ್ನು ಅಡ್ಡಗಟ್ಟಿದ ಆಗಂತುಕರು ಕಾರಿನ ಮೇಲೆ ಕಂಟ್ರಿ ಬಾಂಬ್‌ ಎಸೆದಿದ್ದಾರೆ. ಗಾಬರಿಗೊಂಡ ಶಂಕರ್​ ಕಾರಿಂದ ಇಳಿದು ಓಡಿ ಹೋಗಿದ್ದು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಹತ್ಯೆ ಮಾಡಿ ಪರಾರಿಯಾಗಿದ್ಧಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಸರತ್​ಪೇಟೆ ಪೊಲೀಸರು ಮೃತ ಶಂಕರ್ ವಿರುದ್ಧ ಈ ಹಿಂದೆ 15 ಕ್ರಿಮಿನಲ್​ ಪ್ರಕರಣಗಳು ದಾಖಲಾಗಿದ್ದವು. ಘಟನೆ ನಡೆದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗಿದ್ದು ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಲರಪುರಂ ಪಂಚಾಯತ್ ಕೌನ್ಸಿಲ್ ಅಧ್ಯಕ್ಷ ಮತ್ತು ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ರಾಜ್ಯ ಖಜಾಂಚಿ ಪಿಪಿಜಿ ಶಂಕರ್ ಅವರನ್ನು ಸಮಾಜ ವಿರೋಧಿಗಳು ಕೊಂದಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಯಿತು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
