ಮೇದಿನಿಪುರ:ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಬಿಜೆಪಿ ನಾಯಕ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರದ ಬಲ್ಪೈ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ:ಜುಲೈ 8ರಂದು ರಸ್ತೆಗೆ ಇಳಿಯಲ್ಲ ಸರ್ಕಾರಿ ಆ್ಯಂಬುಲೆನ್ಸ್! ಪ್ರತಿಭಟನೆಗೆ ಇಳಿತಾರಾ ಸಿಬ್ಬಂದಿ?ಸ್ಥಳೀಯ ಬಿಜೆಪಿ ಬೂತ್​ ಅಧ್ಯಕ್ಷ ದೀಪಕ್​ ಸಮಂತಾ ಮೃತ ವ್ಯಕ್ತಿಯಾಗಿದ್ದು, ಸ್ವಗೃಹದಲ್ಲೇ ಸೀಲಿಂಗ್‌ನಿಂದ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆ ಪ್ರಕರಣವೇ ಎಂಬುದರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸರು ಈ ಕುರಿತು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.ಇದನ್ನೂ ಓದಿ:ಬೆಂಗಳೂರಿನಲ್ಲಿ 225 ‘ನಮ್ಮ ಕ್ಲಿನಿಕ್’ ಆರಂಭ; ವೈದ್ಯರ ಕೊರತೆಗೂ ಪರಿಹಾರ ಹುಡುಕಿದ ಬಿಬಿಎಂಪಿಘಟಾಲ್‌ನ ಹಿರಿಯ ಬಿಜೆಪಿ ನಾಯಕ ತನ್ಮಯ್ ದಾಸ್, ಜುಲೈ 8ರಂದು ನಡೆಯುವ ಪಂಚಾಯತ್ ಚುನಾವಣೆಯ ಮೊದಲು ತೃಣಮೂಲ ಕಾಂಗ್ರೆಸ್ ಸೇರುವಂತೆ ದೀಪಕ್ ಮೇಲೆ ಒತ್ತಡ ಹೇರಲಾಗಿತ್ತು. ಈ ಕುರಿತು ಆತ ಮತ್ತು ಅವರ ಕುಟುಂಬ ಪೊಲೀಸರನ್ನು ಸಂಪರ್ಕಿಸಿದ್ದರು. ಅಲ್ಲದೇ, ಈ ಹಿಂದೆ ದೀಪಕ್​ ಪತ್ನಿಗೆ ಬಿಳಿ ಸೀರೆ ಮತ್ತು ಬಿಳಿ ಹೂವುಗಳನ್ನು ಕಳುಹಿಸಲಾಗಿತ್ತು. ಇದು ಕೊಲೆ ಬೆದರಿಕೆಗೆ ಸಮಾನವಾಗಿದೆ ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
