ಭೋಪಾಲ್​:ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು ರಾಜಕೀಯ ಪಕ್ಷದ ನಾಯಕರು ಅತ್ತಿಂದಿತ್ತ ಜಿಗಿಯುತ್ತಿದ್ದಾರೆ.
ಚುನಾವಣೆ ಪರ್ವದಲ್ಲಿ ಇದೆಲ್ಲ ಮಾಮೂಲು ಎಂದು ಹೇಳಬಹುದು. ಆದರೆ, 2020ರಲ್ಲಿ ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೈಜ್​ನಾಥ್​ ಸಿಂಗ್​ ಬಿಜೆಪಿ ತೊರೆದಿದ್ದಾರೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬೈಜ್​ನಾಥ್​ ಮಧ್ಯಪ್ರದೇಶದ ಶಿವಪುರಿ ಭಾಗದಲ್ಲಿ ತಮ್ಮದೇ ಆದ ರಾಜಕೀಯ ಹಿಡಿತವನ್ನು ಹೊಂದಿದ್ಧಾರೆ. ಈ ಬಾರಿ ಸಿಂಗ್​ಗೆ ಬಿಜೆಪಿ ಟಿಕೆಟ್​ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡ; ಉಳ್ಳಾಲದ ವ್ಯಕ್ತಿಗೆ 7 ಲಕ್ಷ ರೂ. ವಿದ್ಯುತ್​ ಬಿಲ್​ ನೀಡಿದ ಮೆಸ್ಕಾಂ ಸಿಬ್ಬಂದಿ
ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಬೈಜ್​ನಾಥ್​ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸುಮಾರು 400ಕ್ಕೂ ಅಧಿಕ ಕಅರುಗಳಲ್ಲಿ ಶಿವಪುರಿಯಿಂದ 300 ಕಿಲೋಮೀಟರ್ ದೂರದಲ್ಲಿರುವ ಭೋಪಾಲ್​ಗೆ ತೆರಳಿದ್ದು ವಿಶೇಷವಾಗಿತ್ತು. ಇದೀಗ ಈ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಬಾಲಿವುಡ್​ ಚಿತ್ರದ ದೃಶ್ಯವನ್ನು ಕಣ್ತುಂಬಿಕೊಂಡಂತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬೈಜ್​ನಾಥ್​ ಜೊತೆಗೆ ಬಿಜೆಪಿಯ 15 ಮಂದಿ ಜಿಲ್ಲಾ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಇವರುಗಳನ್ನು ಪಕ್ಷದ ಹಿರಿಯ ನಾಯಕರಾದ ಕಮಲ್​ನಾಥ್​, ದಿಗ್ವಿಜಯ್​ ಸಿಂಗ್​ ಸೇರಿದಂತೆ ಅನೇಕರು ಬರಮಾಡಿಕೊಂಡರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − 10 =
Remember me
