ಚಂಡಿಗಢ:ನೋಡಲು ತುಂಬಾ ಸುಂದರವಾಗಿದ್ದೀರಿ. ತುಂಬಾ ನಾಜೂಕಿನವರಾದ ನೀವು ಬಿಸಿಲಲ್ಲಿ ಮಾರ್ಕೆಟ್​ಗೆಲ್ಲ ಬರಬಾರದು ಎಂದು ಹೇಳಿ ಟಿಕ್​ಟಾಕ್​ ಸ್ಟಾರ್​ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೊಗಾಟ್​ ಅವರನ್ನು ಛೇಡಿಸಿದ ಸರ್ಕಾರಿ ಅಧಿಕಾರಿಯೊಬ್ಬರು ಚಪ್ಪಲಿ ಏಟು ತಿಂದಿದ್ದಾರೆ.
ಸೊನಾಲಿ ಪೊಗಾಟ್​ ಹಲ್ಲೆ ಮಾಡಿದವರು. ಹಿಸಾರ್​ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್​ ಸಿಂಗ್​ ಏಟು ತಿಂದವರು. ಸೊನಾಲಿ ಪೊಗಾಟ್​ ಅವರನ್ನು ಸಂಪರ್ಕಿಸಿದ್ದ ಕೆಲವು ರೈತರು ಹಿಸಾರ್​ನ ಬಲ್ಸಾಮಂದ್​ ಮಂಡಿಯಲ್ಲಿ ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಖರೀದಿ ವಿಷಯಕ್ಕೆ ಸುಲ್ತಾನ್​ ಸಿಂಗ್​ ಅಡ್ಡಿಪಡಿಸುತ್ತಿರುವುದಾಗಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಸೊನಾಲಿ ಪೊಗಾಟ್​ ಶುಕ್ರವಾರ ಮಂಡಿಯ ಪರಿಶೀಲನೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ಸುಲ್ತಾನ್​ ಸಿಂಗ್​ಗೆ ಮೊದಲೇ ಸೂಚಿಸಿದ್ದರು. ನಿಗದಿಯಂತೆ ಶನಿವಾರ ಮಧ್ಯಾಹ್ನದ ವೇಳೆಗೆ ಸೊನಾಲಿ ಪೊಗಾಟ್​ ಬಲ್ಸಾಮಂದ್​ ಮಂಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸುಲ್ತಾನ್​ ಸಿಂಗ್​, ನಿಮ್ಮಂಥ ಚೆಂದುಳ್ಳಿ ಚೆಲುವೆಯರು, ನಾಜೂಕಿನವರು ಇಷ್ಟೊತ್ತಿನಲ್ಲಿ, ಹೀಗೆ ಮಂಡಿಗೆಲ್ಲ ಬರಬಾರದು ಎಂದು ಹೇಳಿದರು ಎನ್ನಲಾಗಿದೆ.
ಇದನ್ನೂ ಓದಿ:ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!
ಸ್ವಲ್ಪಹೊತ್ತು ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದ ಸೊನಾಲಿ ಬನ್ಸಾಲ್​, ನೆರಳಿನಲ್ಲಿ ಕುಳಿತಿದ್ದ ಸುಲ್ತಾನ್​ ಸಿಂಗ್​ ಬಳಿಗೆ ಹೋಗಿ ತಾವು ಹೆಣ್ಣು ಎಂಬ ಕಾರಣಕ್ಕೆ ಅಗೌರವವಾಗಿ ವರ್ತಿಸಿದ್ದನ್ನು ಪ್ರಶ್ನಿಸಿ ಚಪ್ಪಲಿಯಿಂದ ಹೊಡೆಯಲಾರಂಭಿಸಿದರು. ಸಿಟ್ಟು ತಣಿದ ನಂತರ ಅವರು ಅಲ್ಲಿಂದ ಹೊರಟು ಹೋದರು.
ಪರಸ್ಪರ ದೂರು:ಮಂಡಿಯಿಂದ ಹೊರಟ ಸೊನಾಲಿ ಪೊಗಾಟ್​ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ತಮ್ಮನ್ನು ಅವಮಾನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದರೆಂದು ಸುಲ್ತಾನ್​ ಸಿಂಗ್​ ವಿರುದ್ಧ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸುಲ್ತಾನ್​ ಸಿಂಗ್​ ಕೂಡ ಠಾಣೆಗೆ ತೆರಳಿ, ಸರ್ಕಾರಿ ಅಧಿಕಾರಿಯಾದ ತಮ್ಮ ಮೇಲೆ ಸಾರ್ವಜನಿಕವಾಗಿ ವಿನಾಕಾರಣ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಗಿಯೂ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿಯೂ ಸೊನಾಲಿ ಪೊಗಾಟ್​ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹರಿಯಾಣ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್​ ಬರಾಲಾ, ಪೊಲೀಸ್​ ತನಿಖೆ ಮುಗಿಯುವುದನ್ನೇ ಕಾಯುತ್ತಿದ್ದು, ನಂತರ ಸೊನಾಲಿ ಪೊಗಾಟ್​ ಅವರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್​ನ ವಕ್ತಾರ ಹಾಗೂ ಶಾಸಕ ರಣದೀಪ್​ ಸಿಂಗ್​ ಸುರ್ಜೇವಾಲಾ, ಬಿಜೆಪಿ ನಾಯಕಿಯ ಈ ಕೃತ್ಯ ತುಂಬಾ ಹೀನವಾಗಿದೆ. ಪೊಗಾಟ್​ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಮನೋಹರ್​ಲಾಲ್​ ಕಟ್ಟರ್​ ಧೈರ್ಯ ತೋರುವರೇ ಎಂದು ಪ್ರಶ್ನಿಸಿದ್ದಾರೆ.
https://youtu.be/sAnsWq2zUYg
VIDEO| ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯರೂಪಕ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
