ಮಹಿಸಾಗರ್​:ಕರೊನಾ ಸೋಂಕು ಇಷ್ಟೆಲ್ಲ ಹೆಚ್ಚುತ್ತಿದೆ. ಗುಂಪು ಗೂಡಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ ನಡೆಸಬೇಡಿ ಎಂದು ಸರ್ಕಾರಗಳು ಪದೇಪದೆ ಹೇಳುತ್ತಿವೆ. ಆದರೆ ಕೆಲವರಿಗೆ ಅದೆಲ್ಲ ಅರ್ಥವಾಗುತ್ತಿಲ್ಲ.ಇದೀಗ ಗುಜರಾತ್​​ನಿಂದಲೂ ಅಂಥದ್ದೇ ಒಂದು ಘಟನೆ ವರದಿಯಾಗಿದೆ. ಬಿಜೆಪಿ ಯುವ ಮುಖಂಡನೋರ್ವ ರಸ್ತೆ ಮಧ್ಯೆ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.
ರಸ್ತೆ ಮಧ್ಯೆ ಕಾರು ನಿಲ್ಲಿಸಿ, ಅದರ ಮೇಲೆ ದೊಡ್ಡ ಕೇಕ್​ ಇಟ್ಟು, ಖಡ್ಗದಲ್ಲಿ ಕೇಕ್​ ಕತ್ತರಿಸಿದ್ದಾರೆ. ಅವರ ಸುತ್ತಮುತ್ತ ಹಲವು ಯುವಕರು ಶಾಂಪೇನ್​ ಬಾಟಲಿಗಳನ್ನು ಹಿಡಿದು ಕೂಗಾಡುತ್ತ ಮಜಾ ಮಾಡಿದ್ದಾರೆ. ವಿಡಿಯೋ ಎಲ್ಲ ಕಡೆ ವೈರಲ್​ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ:ಮತ್ತೆ ರಾಹುಲ್​ ಗಾಂಧಿ ಕಾಂಗ್ರೆಸ್ ಅಧ್ಯಕ್ಷ? ಇಂದಿನ ಸಂಸದರ ಸಭೆಯಲ್ಲಿ ಏನಾಯ್ತು?
ಗುಜರಾತ್​ನ ಮಹಿಸಾಗರ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಹೀಗೆ ಕೊವಿಡ್​-19 ನಿಯಂತ್ರಣಾ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ರಸ್ತೆ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಂಡವನು ಬಿಜೆಪಿಯ ಜಿಲ್ಲಾ ಕನ್ವೀನರ್​ ಕವನ್ ಪಟೇಲ್​. ಈ ಯುವ ಮುಖಂಡ ಹೀಗೆ ಬೇಜವಬ್ದಾರಿತನದಿಂದ ಜನ್ಮದಿನ ಆಚರಿಸಿಕೊಂಡು ಪ್ರತಿಪಕ್ಷಗಳ ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.ಈ ಬರ್ತ್​ ಡೇ ಪಾರ್ಟಿಗೆ ಸಂಬಂಧಪಟ್ಟಂತೆ ಪೊಲಿಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಿಜೆಪಿ ಮುಖಂಡನ ಹುಟ್ಟುಹಬ್ಬ ಆಚರಣೆ ಬಗ್ಗೆ ಗುಜರಾತ್​ ಕಾಂಗ್ರೆಸ್ ಅಧ್ಯಕ್ಷ ಅಮಿತ್​ ಚಾವಡಾ ಅವರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯ ಕನ್ವಿನರ್​ ಮತ್ತು ಕಾರ್ಯಕರ್ತರು ಮಧ್ಯರಸ್ತೆಯಲ್ಲಿ ಲಿಕರ್​ ಬಾಟಲಿಗಳನ್ನು ಹಿಡಿದು, ಬರ್ತ್​ ಡೇ ಪಾರ್ಟಿ ಮಾಡಿದ್ದಾರೆ. ಕೊವಿಡ್​-19 ಇರುವ ಈ ಸಂದರ್ಭದಲ್ಲಿ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ. ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿಲ್ಲ. ಮಾಸ್ಕ್​ ಧರಿಸಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
तलवार से काटा केक,शराब की महेफील और बिना सोशल डिस्टन्स के मज़ा ले रहे है ये है,जीस का जन्मदिन हे वो है, महीसागर ज़िले का बीजेपी का कन्वीनर कवन पटेल हैं।@SP_Mahisagar@BJP4Gujaratpic.twitter.com/rkcF8AlsvV— Gopi Maniar ghanghar (@gopimaniar)July 11, 2020
तलवार से काटा केक,शराब की महेफील और बिना सोशल डिस्टन्स के मज़ा ले रहे है ये है,जीस का जन्मदिन हे वो है, महीसागर ज़िले का बीजेपी का कन्वीनर कवन पटेल हैं।@SP_Mahisagar@BJP4Gujaratpic.twitter.com/rkcF8AlsvV
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
