ಉತ್ತರಪ್ರದೇಶ:ಉತ್ತರಪ್ರದೇಶದ ಮೊರಾದಾಬಾದ್‍ನಲ್ಲಿ 30 ವರ್ಷದ ಬಿಜೆಪಿ ನಾಯಕ ಅನುಜ್ ಚೌಧರಿಯನ್ನು ಗುರುವಾರ ಸಂಜೆ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.
ಅನುಜ್ ಚೌಧರಿ ತಮ್ಮ ಅಪಾರ್ಟ್ಮೆಂಟ್ ಹೊರಗೆ ನಡೆಯುತ್ತಿರುವಾಗ ಮೋಟರ್ ಸೈಕಲ್ ಗಳಲ್ಲಿ ಅಪರಿಚಿತ ಹಲ್ಲೆಕೋರರಿಂದ ಹಲ್ಲೆಗೊಳಗಾದರೆಂದು ಆರೋಪಿಸಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆದರೆ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಬಾಂಬ್​ ಎಸೆದು ಬಿಜೆಪಿ ಮುಖಂಡನ ಹತ್ಯೆ!
ಮೊರಾದಾಬಾದ್ ಹೆಮರಾಜ್ ಮೀನಾದ ಪೊಲೀಸ್ ಹಿರಿಯ ಅಧೀಕ್ಷಕ ( ಎಸ್ ಎಸ್ ಪಿ )“ ಮೃತರ ಕುಟುಂಬ ಸದಸ್ಯರು ದೂರು ದಾಖಲಿಸಿದ್ದು ಅಮಿತ್ ಚೌಧರಿ ಮತ್ತು ಅನಿಕೇತ್‍ ಎಂಬ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
⚠️ Warning: Disturbing visuals⚠️
BJP leader Anuj Chaudhary shot dead in Moradabad.
He was shot dead while he was on evening walk with his brother.
Video Credit:@Shariq_mbdhttps://t.co/yHnrHblDTO
— Siddharth (@SidKeVichaar)August 10, 2023

ಅನುಜ್ ಚೌಧರಿ ಸಾಂಬಲ್‍ನ ಅಸ್ಮೋಲಿ ಬ್ಲಾಕ್‍ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾಗಿದ್ದರು. ಕೊಲೆ ಹಿಂದೆ ರಾಜಕೀಯ ಪ್ರತಿಸ್ಪರ್ಧಿಗಳ ಕೈವಾಡ ಇದೆ ಎಂದು ಚೌಧರಿಯ ಕುಟುಂಬ ಆರೋಪಿಸಿದೆ.
ಇದನ್ನೂ ಓದಿ:ಬಿಜೆಪಿ ನಾಯಕನಿಗೆ ಗುಂಡಿಟ್ಟು ಬರ್ಬರ ಹತ್ಯೆಗೈದು ದುಷ್ಕರ್ಮಿಗಳು ಪರಾರಿ
ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣವನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:ಬಿಜೆಪಿ ಕಾರ್ಪೊರೇಟರ್​ ಮೇಲೆ ಗುಂಡಿನ ದಾಳಿ- ಸಾವು
“ಅನುಜ್ ಚೌಧರಿ ಹಾಗೂ ಕೊಲೆ ಆರೋಪಿಗಳ ನಡುವೆ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದ್ದು ನಾಲ್ಕು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದ್ದು ಅವರನ‍ನು ವಶಕ್ಕೆ ಪಡೆದ ನಂತರ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಮೊರಾದಾಬಾದ್ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.(ಏಜೆ್ನ್ಸೀಸ್)
ಬಿಹಾರದಲ್ಲಿ ಪದವಿ ಪ್ರಮಾಣಪತ್ರ ಖರೀದಿಸಿ ಚೀನಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಯತ್ನಿಸಿದ ಸಂಸದ ಅಂದರ್!

ಕೇಂದ್ರದ ಯೋಜನೆ ಹೆಸರಲ್ಲಿ ನಿರುದ್ಯೋಗಿಗಳಿಂದ ಹಣ ಪೀಕಿದ್ರಾ ಪಾಪಿಗಳು?

10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
