ನೋಯ್ಡಾ:ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಗುಂಪೊಂದು ಬಿಜೆಪಿ ನಾಯಕನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದ ಲಡ್​ಪುರದ ಕಸ್ನಾ ಎಂಬ ಪ್ರದೇಶದಲ್ಲಿ ನೆಡೆದಿದೆ.
ಹಲ್ಲೆಗೊಳಗಾದ ಬಿಜೆಪಿ ನಾಯಕನನ್ನು ರಾಹುಲ್​ ಪಂಡಿತ್​ ಎಂದು ಗುರುತಿಸಲಾಗಿದ್ದು, ಘಟನೆಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲೇ ಈ ಗತಿಯಾದರೆ ಬೇರೆಡೆ ಇನ್ನೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ರಾಹುಲ್​ ಪಂಡಿತ್​ ಹಾಗೂ ಗುಂಪಿನ ನಡುವೆ ವಿಚಾರ ಒಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆ ಮಾಡಲಾಗಿದೆ. ಯಾವ ಕಾರಣಕ್ಕೆ ಗಲಾಟೆಯಾಯಿತು ಎಂದು ತಿಳಿದು ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
BJP leader Rahul Pandit assaulted by goons, brutally beaten with sticks. Police say it's a clash between factions.#ViralVideocaptures shocking attack in Ladpura, Kasna.#GreaterNoidapic.twitter.com/pTZSfN7hSh
ಇದನ್ನೂ ಓದಿ:VIDEO| ವೃದ್ಧ ಕ್ಯಾಬ್​ ಚಾಲಕನನ್ನು ಅಮಾನುಷವಾಗಿ ಥಳಿಸಿದ ಗುಂಪು
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕೆಂಡಕಾರಿರುವ ನೆಟ್ಟಿಗರು ಆಡಳಿತ ಪಕ್ಷದ ನಾಯಕನ ಮೇಲೆ ಹಾಡಹಗಲೇ ಈ ರೀತಿ ಥಳಿಸಿದರೆ ಸಾರ್ವಜನಿಕರ ಕಥೆಯೇನು. ಆರೋಪಿಗಳನ್ನು ಬಂಧಿಸಿ ಶೀಘ್ರವೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಬಿಜೆಪಿ ನಾಯಕ ರಾಹುಲ್​ ಪಂಡಿತ್​ ಮೇಲಿನ ಹಲ್ಲೆ ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ರಾಜಕೀಯ ನಾಯಕರಿಗೆ ಈ ರೀತೊಯಾದರೆ ಮಿಕ್ಕವರ ಗತಿಯೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twenty =
Remember me
