ಹೈದರಾಬಾದ್​:ಬಿಜೆಪಿ ಮುಖಂಡರೊಬ್ಬರ ಶವ ಅವರ ಮನೆಯ ಕೋಣೆಯೊಂದರಲ್ಲಿ ಮುಖಂಡನ ಶವ ನೇತಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಜ್ಞಾನೇಂದ್ರ ಪ್ರಸಾದ್ (45) ಸಾವಿಗೀಡಾದ ಬಿಜೆಪಿ ಮುಖಂಡ.
ಜ್ಞಾನೇಂದ್ರ ಪ್ರಸಾದ್ ತೆಲಂಗಾಣದ ಸರ್ಲಿಂಗಂಪಲ್ಲಿ ವಿಧಾನಸಭಾ ಕ್ಷೇತ್ರದವರಾಗಿದ್ದು, ಅಲ್ಲಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾನು ನಿದ್ರೆ ಮಾಡಬೇಕು ಎಂದು ಪಿಎ ಬಳಿ ಹೇಳಿ ಕೋಣೆಗೆ ಹೋಗಿದ್ದರು. ನಂತರ ತಿಂಡಿ ಕೊಡಲು ಎಂದು ಹೋಗಿ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕಿಟಕಿ ಬಾಗಿಲು ಒಡೆದು ನೋಡಿದ ಪಿಎಗೆ, ಮುಖಂಡ ಸೀಲಿಂಗ್ ಫ್ಯಾನ್​ಗೆ ನೇಣು ಹಾಕಿಕೊಂಡಿದ್ದು ಕಾಣಿಸಿತ್ತು.
ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್​ನೋಟ್​ ಏನೂ ಪತ್ತೆಯಾಗಿಲ್ಲ. ತಿಂಗಳ ಹಿಂದೆ ಇವರು ಅಪಘಾತಕ್ಕೀಡಾಗಿದ್ದು, ಕಾಲು ಮುರಿತಕ್ಕೆ ಒಳಗಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕುರಿತು ಇನ್ನೂ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
