ಭೋಪಾಲ್​:ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿಯವರು ನಿಧಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ರಾಮ ಮಂದಿರ ಹೆಸರಲ್ಲಿ ಹಣ ಸಂಗ್ರಹಿಸಿ ಅದರಲ್ಲೇ ಕುಡಿದು ಮಜಾ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕಾಂಗ್ರೆಸ್​ ಶಾಸಕ ಕಾಂತಿಲಾಲ್ ಬಹುರಿಯಾ ಇಂತದ್ದೊಂದು ಆರೋಪವನ್ನು ಮಾಡಿದ್ದಾರೆ. ಬಿಜೆಪಿಯವರು ವರ್ಷದಿಂದ ರಾಮ ಮಂದಿರ ಹೆಸರಲ್ಲಿ ನಿಧಿ ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಕೆಲವು ನಾಯಕರು ಹಗಲೆಲ್ಲ ಶ್ರೀ ರಾಮನ ಹೆಸರಲ್ಲಿ ದುಡ್ಡು ಸಂಗ್ರಹಿಸುತ್ತಾರೆ. ರಾತ್ರಿ ಅದೇ ಹಣದಲ್ಲಿ ಕುಡಿದು ಮಜಾ ಮಾಡುತ್ತಾರೆ ಎಂದು ಅವರು ದೂರಿದ್ದಾರೆ.
ಕಾಂತಿಲಾಲ್​ ಅವರ ಈ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ರಾಮ ಮಂದಿರಕ್ಕೆ ಸಂಗ್ರಹಿಸಲಾಗುತ್ತಿರುವ ನಿಧಿ ನೇರವಾಗಿ ರಾಮ ಮಂದಿರ ಟ್ರಸ್ಟ್​ನ ಖಾತೆಗೆ ಹಾಕಲಾಗುತ್ತಿದೆ ಎಂದು ಮಧ್ಯಪ್ರದೇಶ ಸ್ಪೀಕರ್​ ಹೇಳಿದ್ದಾರೆ. (ಏಜೆನ್ಸೀಸ್​)
ಪ್ರೇಮಿಗಳ ದಿನಕ್ಕೆ ತಾಜ್​ ಹೋಟೆಲ್​ ಸ್ಪೆಷಲ್​ ಗಿಫ್ಟ್​? ಪ್ರೇಮಿಗಳಿಗೆ ವಾರದ ಕಾಲ ಫ್ರೀ ರೂಂ!?

ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೇರಿದ ‘ಆತ್ಮನಿರ್ಭರತಾ’: ವರ್ಷದ ಶಬ್ದವಾಗಿ ಆಯ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twelve =
Remember me
