ಉತ್ತರಾಖಂಡ:ವಾರದ ಹಿಂದೆ ನಾಪತ್ತೆ ಆಗಿದ್ದ ಯುವತಿಯೊಬ್ಬಳ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಆತನ ರೆಸಾರ್ಟ್​​ನಲ್ಲೇ ಈ ಮಹಿಳೆಯ ಕೊಲೆ ನಡೆದಿತ್ತು.
ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಳ್ಕಿತ್ ಆರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹರಿದ್ವಾರದ ರಿಷಿಕೇಶ್​ನಲ್ಲಿರುವ ಪುಳ್ಕಿತ್ ಮಾಲೀಕತ್ವದ ರೆಸಾರ್ಟ್​ನಲ್ಲಿ ನಡೆದ 19ರ ವಯಸ್ಸಿನ ಯುವತಿಯ ಕೊಲೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಜತೆಗೆ ಇನ್ನಿಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ.
ಕೊಲೆಗೀಡಾಗಿರುವ ಯುವತಿ ಇದೇ ರೆಸಾರ್ಟ್​​ನಲ್ಲೇ ಉದ್ಯೋಗಿಯಾಗಿದ್ದು, ವಾರದ ಹಿಂದೆ ಕಾಣೆಯಾಗಿದ್ದಳು. ಈ ವಿಷಯ ಪುಳ್ಕಿತ್ ಹೆಸರಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪುಳ್ಕಿತ್​ನನ್ನು ಬಂಧಿಸಿದ್ದಾರೆ.
ಆರೋಪಿಗಳು ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದರೆ ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಪರಾಧ ಎಸಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಯುವತಿಯ ಶವಕ್ಕಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.
ಮಗನಿಗೆ ಉಗ್ರರ ನಂಟು, ನೊಂದ ತಂದೆ ಹೃದಯಾಘಾತಕ್ಕೀಡಾಗಿ ಸಾವು..
ಕಾಂಗ್ರೆಸಿಗರಿಗೆ ಕಾನೂನು ಸಂಕಷ್ಟ?; ಪೇಸಿಎಂ ಪೋಸ್ಟರ್​ನಲ್ಲಿ ಫೋಟೋ, ಕೋರ್ಟ್​ ಮೆಟ್ಟಿಲೇರಲಿರುವ ನಟ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
